ಯಕ್ಷ ಸಾಧಕರು 352

"ಯಕ್ಷ ಕಲಾಶ್ರಿತೆ"

ಇವರು ಬಹುಮುಖ ಪ್ರತಿಭೆ. ಯಕ್ಷಗಾನ, ನೃತ್ಯ, ನಾಟಕ ಹೀಗೆ ವಿವಿಧ ಪ್ರಕಾರದ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ಛಾಪನ್ನು ತೋರಿಸುತ್ತಿರುವ ಯುವ ಕಲಾವಿದೆ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ.

ಸುಕನ್ಯಾ ಕೋಟ್ಯಾನ್ ಹಾಗೂ ಬಾಲಕೃಷ್ಣ ಎಂ ಎಸ್ ಇವರ ಮಗಳಾಗಿ 14.05.2006ರದು ಜನನ. ಪ್ರಸ್ತುತ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.




ಯಕ್ಷಗಾನ ಗುರುಗಳು:-
♦️ ಜಿತೇಶ್ ಸೂರಿಂಜೆ.
♦️ ಶ್ರೀಮತಿ ಪೂರ್ಣಿಮಾ ಯತೀಶ್ ರೈ
ನೃತ್ಯ ಗುರುಗಳು:-
♦️ ಕಾರ್ತಿಕ್ ಕುಲಾಲ್ ಕುಳಾಯಿ.
♦️ ಅಕ್ಷಯ್ ಕುಳಾಯಿ.
ನಾಟಕ ಗುರುಗಳು:-
♦️ ನಾಗೇಶ್ ಕುಲಾಲ್.
♦️ ಕಾರ್ತಿಕ್ ಕುಲಾಲ್.

ಯಕ್ಷಗಾನ ಕ್ಷೇತ್ರಕ್ಕೆ ಬರಲು ನನಗೆ ಪ್ರೇರಣೆಯಾದವರು ನನ್ನ ಗುರುವರು. ಅವರ ಕಲಾವೈಭವ, ಶಿಸ್ತಿನ ಅಭ್ಯಾಸ, ಹಾಗೂ ಕಲೆಯನ್ನು ಪ್ರಾಮಾಣಿಕವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬದ್ಧತೆ ನನ್ನ ಮೇಲೆ ಆಳವಾದ ಪ್ರಭಾವ ಬೀರಿದೆ. ಅವರನ್ನೆ ನೋಡಿ ನಾನು ಈ ಕಲೆ ಕಲಿಯಲು ಹಾಗೂ ಅದರಲ್ಲಿ ಮುಂದುವರಿಯಲು ಪ್ರೇರಿತನಾದೆ.

ನೆಚ್ಚಿನ ಪ್ರಸಂಗಗಳು:-
ಸುದರ್ಶನ ವಿಜಯ, ಬಬ್ರುವಾಹನ ಕಾಳಗ, ದೇವಿ ಮಹಾತ್ಮೆ, ಶಶಿಪ್ರಭೆ ಪರಿಣಯ, ಕೃಷ್ಣ ಲೀಲೆ, ಕಂಸ ವಧೆ.
ನೆಚ್ಚಿನ ವೇಷಗಳು:-
ಸುದರ್ಶನ, ಬಬ್ರುವಾಹನ, ಚಂಡ ಮುಂಡ, ಕೃಷ್ಣ, ಮಾಲಿನಿ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಕಥೆ, ಪಾತ್ರದ ಸ್ವಭಾವ ಮತ್ತು ಸಂಭಾಷಣೆಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ. ಪಾತ್ರಕ್ಕೆ ತಕ್ಕ ಭಾವಾಭಿನಯ, ನೃತ್ಯಭಂಗಿ ಹಾಗೂ ಲಯದ ಅಭ್ಯಾಸ ಮಾಡಿ. ವೇಷಭೂಷಣ, ಮುಖಾಲೆ ಮತ್ತು ಆಭರಣಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು, ಪ್ರೇಕ್ಷಕರ ದೃಷ್ಟಿಯನ್ನು ಸೆಳೆಯುವಂತಾಗಿ ನನ್ನ ಹಾವಭಾವ, ಧ್ವನಿಮಾಧುರ್ಯ ಮತ್ತು ವೇದಿಕಾಭಾವವನ್ನು ತಯಾರಿಸಿ ಮನಸ್ಸನ್ನು ಕೇಂದ್ರೀಕರಿಸಿ, ಆತ್ಮವಿಶ್ವಾಸದಿಂದ ವೇದಿಕೆಗೆ ತೆರಳುತ್ತೇನೆ ಎಂದು ಹೇಳುತ್ತಾರೆ ನಿರೀಕ್ಷಾ.






ನೃತ್ಯ  ಹಾಗೂ ನಾಟಕ ಯಕ್ಷಗಾನ ರಂಗದಲ್ಲಿ ಪಾತ್ರ ಮಾಡುವಾಗ ಯಾವ ರೀತಿಯಲ್ಲಿ ಸಹಕಾರಿಯಾಗಿದೆ:-
♦️ ಭಾವಾಭಿನಯ – ನಾಟಕದಿಂದ ಮುಖಭಾವ, ಹಾವಭಾವಗಳನ್ನು ಸರಿಯಾಗಿ ತೋರಿಸಲು ಕಲಿಯಬಹುದು.
♦️ ದೇಹಭಾಷೆ – ನೃತ್ಯದಿಂದ ದೇಹದ ಚಲನೆ, ಭಂಗಿ, ವೇದಿಕೆಯಲ್ಲಿ ನಿಲ್ಲುವ ಧೈರ್ಯ ಬರುತ್ತದೆ.
♦️ ರಂಗದ ಶಿಸ್ತಿನ ಅರಿವು – ನಾಟಕವು ಕಥಾನಕವನ್ನು ಸರಿಯಾಗಿ ಹಿಡಿದಿಡಲು ಸಹಕಾರಿ.
♦️ ಛಂದಸ್ಸು ಮತ್ತು ಲಯ – ನೃತ್ಯದಿಂದ ಲಯಬದ್ಧತೆ ಬರುತ್ತದೆ, ಅದು ಯಕ್ಷಗಾನದ ತಾಳಮದ್ದಲಿಗೆ ಹೊಂದಿಕೊಳ್ಳಲು ಮುಖ್ಯ.
♦️ ಪ್ರೇಕ್ಷಕರ ಗಮನ ಸೆಳೆಯುವ ಸಾಮರ್ಥ್ಯ – ಇವೆರಡೂ ವೇದಿಕೆಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ನಾನು ಕಳೆದ ಎಂಟು ವರ್ಷಗಳಿಂದ ಯಕ್ಷಗಾನ ಕಲಿಯುತ್ತಿದ್ದೇನೆ. ಯಕ್ಷಗಾನವು ನಮ್ಮ ಕರ್ನಾಟಕದ ಶ್ರೇಷ್ಠ ಜನಪದ ಕಲೆಯಾಗಿ, ಇಂದಿಗೂ ಜನಮನದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬೆಳಕು ಮತ್ತು ಧ್ವನಿ ವ್ಯವಸ್ಥೆಗಳ ಬಳಕೆಯಿಂದ ಇದರ ಪ್ರದರ್ಶನಗಳು ಇನ್ನಷ್ಟು ಆಕರ್ಷಕವಾಗಿವೆ. ಶಾಲೆ, ಕಾಲೇಜು, ಹಾಗೂ ಸಾಮಾಜಿಕ ಮಾಧ್ಯಮ, ಯುಟ್ಯೂಬ್, ಮೂಲಕವೂ ಯಕ್ಷಗಾನವನ್ನು ಪ್ರಚಾರ ಮಾಡಲಾಗುತ್ತಿದೆ. ಆದರೆ, ಇಂದಿನ ಪೀಳಿಗೆಯಲ್ಲಿ ಪ್ರದರ್ಶನಕ್ಕೆ ಅವಕಾಶ  ಕಡಿಮೆಯಾಗುತ್ತಿರುವುದು ಹಾಗೂ ಬೇರೆ ಮನರಂಜನೆಗಳ ಪ್ರಭಾವವು ಹೆಚ್ಚುತ್ತಿರುವುದು ಸವಾಲಾಗಿದೆ. ಈ ಕಲೆ ಮುಂದಿನ ಪೀಳಿಗೆಗೂ ಉಳಿಯಲು, ನಾವು ಕಲಿಯುವುದು, ಪಾಲ್ಗೊಳ್ಳುವುದು  ಅವಶ್ಯಕವಾಗಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಯಕ್ಷಗಾನ ಪ್ರೇಕ್ಷಕರು ಪರಂಪರೆಯ ಕಲೆಗಾಗಿ ಇನ್ನೂ ಹೆಚ್ಚಿನ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತಿದ್ದಾರೆ. ಹಿರಿಯರು ಈ ಕಲೆಯನ್ನು ಪೋಷಿಸುತ್ತಿರುವರೆಂದರೆ, ಯುವ ಪೀಳಿಗೆಯೂ ಆಸಕ್ತಿಯಿಂದ ಪ್ರದರ್ಶನಗಳನ್ನು ನೋಡುವುದು ಸಂತೋಷಕರ ಸಂಗತಿ. ಆದರೆ  ಪ್ರೇಕ್ಷಕರ ಸಂಖ್ಯೆ ಕುಗ್ಗುವ ಪರಿಸ್ಥಿತಿಯೂ ಉಂಟಾಗುತ್ತದೆ. ಆದರೂ, ನಿಷ್ಠಾವಂತ ಪ್ರೇಕ್ಷಕರ ಬೆಂಬಲವೇ ಯಕ್ಷಗಾನದ ಮುಂದಿನ ಬೆಳವಣಿಗೆಗೆ ಪ್ರಮುಖ ಶಕ್ತಿ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನೀಲವುಗಳೆನ್ನು:-
ನಾನು 8 ವರ್ಷಗಳಿಂದ ಯಕ್ಷಗಾನ ಕಲಿಯುತ್ತಿರುವ ಕಲಾವಿದೆಯಾಗಿ, ಆಹಾರ್ಯದ ಪ್ರಾಮಾಣಿಕತೆ ಮತ್ತು ಪರಂಪರೆಯನ್ನು ಕಾಪಾಡುವುದು ನನ್ನ ಮೊದಲ ಆದ್ಯತೆ. ಮೂಲ ಶೈಲಿಯನ್ನು ಉಳಿಸಿಕೊಂಡು ಹಾಗೂ ಶಾಲೆ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಹಸ್ತಾಂತರಿಸುವುದು ನನ್ನ ದೃಢ ನಿಲುವಾಗಿದೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನಾನು ನನ್ನ ಗುರುವರ್ಯರಂತೆ ಆಗಬೇಕೆಂಬ ಆಶಯವಿದೆ. ಯಕ್ಷಗಾನವನ್ನು ನಾನು ಹಣಕ್ಕಾಗಿ ಅಲ್ಲ, ಪ್ರೀತಿಯಿಂದ ಕಲಿಯುತ್ತೇನೆ ಮತ್ತು ಕಲಿಸುತ್ತೇನೆ. ಕಲಿಯುವುದನ್ನೂ, ಕಲಿಸುವುದನ್ನೂ ನಾನು ಮನಸಾರೆ ಇಷ್ಟಪಡುತ್ತೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲರಿಗೂ ಯಕ್ಷಗಾನ ಕಲಿಸಿ, ಈ ಕಲೆ ಮುಂದಿನ ಪೀಳಿಗೆಗೆ ತಲುಪಿಸುವುದು ನನ್ನ ಗುರಿ. ನಾನು ಯಕ್ಷಗಾನದಲ್ಲಿ ಇನ್ನಷ್ಟು ತಾಂತ್ರಿಕತೆ ಹಾಗೂ ಅಭಿನಯ ಕೌಶಲ್ಯವನ್ನು ವೃದ್ಧಿಸಿ, ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಗುರಿ ಹೊಂದಿದ್ದೇನೆ. ಜೊತೆಗೆ, ಮಕ್ಕಳಿಗೆ ಹಾಗೂ ಯುವಕರಿಗೆ ಯಕ್ಷಗಾನದ ಪರಿಚಯ ಮತ್ತು ತರಬೇತಿ ನೀಡುವ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಯೋಜನೆ ಇದೆ. ಮುಂದಿನ ವರ್ಷಗಳಲ್ಲಿ ಸ್ವಂತ ತಂಡದೊಂದಿಗೆ ಸಂಪೂರ್ಣ ಪ್ರದರ್ಶನ ನೀಡುವ ಕನಸೂ ಹೊಂದಿದ್ದೇನೆ.








ಸನ್ಮಾನ ಹಾಗೂ ಪ್ರಶಸ್ತಿ:-
♦️ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯಿಂದ ಬಾಲ ಪ್ರತಿಭೆ ಎಂಬ ರಾಜ್ಯ ಪ್ರಶಸ್ತಿ - 2022.
♦️ ಗೋವಿಂದಾಸ್ ಕಾಲೇಜುನಲ್ಲಿ ನಡೆದ ಯಕ್ಷಯಾನ ಸ್ಪರ್ಧೆಯಲ್ಲಿ ವಯಕ್ತಿಕ ವಿಭಾಗ - ಪ್ರಥಮ ಬಹುಮಾನ-2023.
♦️ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ತಂಡ ಶ್ರೇಷ್ಠ ಪ್ರಶಸ್ತಿ - 2024.

ತಮ್ಮ ನಾಲ್ಕನೇ ವಯಸ್ಸಿನಿಂದ "ಕಲಾಕುಂಭ ಕುಳಾಯಿ" ತಂಡದ ಜೊತೆಗೆ ರಾಜ್ಯದ ಮೂಲೆಮೂಲೆಗಳಲ್ಲಿ ಹೆಜ್ಜೆ ಹಾಕಿ ಇಲ್ಲಿಯವರಗೆ 500ರಕ್ಕೂ ಹೆಚ್ಚು ಪ್ರದರ್ಶನ  ಹೆಮ್ಮೆಯ ಕಲಾವಿದೆ ನಿರೀಕ್ಷಾ.
ನಾಟಕ, ಯಕ್ಷಗಾನ, ಕುಣಿತ ಭಜನೆ, ಜನಪದ ನೃತ್ಯ ಇವರ ಹವ್ಯಾಸಗಳು.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395