ಯಕ್ಷ ಸಾಧಕರು 354
"ಗಾನ ಪ್ರತಿಭೆ"
ಉಡುಪಿ ಜಿಲ್ಲೆಯ ಕುಂದಾಪುರದ ಗುಜ್ಜಾಡಿಯ ಮುತ್ತಯ್ಯ ಆಚಾರ್ ಹಾಗೂ ರತ್ನಾವತಿ ಇವರ ಮಗನಾಗಿ 08.01.1982ರಂದು ಯೋಗೇಂದ್ರ ಆಚಾರ್ ಜನನ. ಯಕ್ಷಗಾನ ರಂಗಕ್ಕೆ ಬರಲು ಇವರ ತಂದೆ ಪ್ರೇರಣೆ. ಸುಬ್ಬಣ್ಣ ಗಾಣಿಗ ಹೇರಂಜಾಲು, ಚಂದ್ರಹಾಸ ಹೆಬ್ಬಾರ್ ಯಳೂರು, ಕಮಲಶಿಲೆ ಮಹಾಬಲ ದೇವಾಡಿಗ ಇವರ ಯಕ್ಷಗಾನ ಗುರುಗಳು.
ನೆಚ್ಚಿನ ಪ್ರಸಂಗಗಳು:-
ವೀರಮಣಿ ಕಾಳಗ, ಶ್ವೇತಕುಮಾರ ಚರಿತ್ರೆ, ರಾಜ ರುದ್ರಕೋಪ, ದೇವಿ ಮಹಾತ್ಮೆ, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಇತ್ಯಾದಿ.
ನೆಚ್ಚಿನ ವೇಷಗಳು:-
ಅಂಬೆ, ಮದನಾಕ್ಷಿ, ಆಂಜನೇಯ, ಶ್ವೇತಕುಮಾರ, ತ್ರಿಲೋಕ ಸುಂದರಿ, ಇತ್ಯಾದಿ.
ಪ್ರಸಂಗದ ಕಥೆ ಹಾಗೂ ಪಾತ್ರದ ಪದ್ಯಗಳನ್ನು ಓದಿ ತಿಳಿಯುವುದು ಹಾಗೂ ಹಿರಿಯ ಕಲಾವಿದರಲ್ಲಿ ಸಲಹೆ ಕೇಳಿ ರಂಗಕ್ಕೆ ಹೋಗುವ ಮೊದಲು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಯೋಗೇಂದ್ರ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ನಿಮ್ಮ ಅಭಿಪ್ರಾಯ:-
ಯಕ್ಷಗಾನ ನೇರಪ್ರಸಾರದಿಂದ ವಿಶ್ವದ ಎಲ್ಲಡೆ ಯಕ್ಷಗಾನವನ್ನು ನೋಡುವಂಥಾಗಿದೆ. ಕಾಲಮಿತಿ ಕಾರ್ಯಕ್ರಮ ಯಕ್ಷಗಾನಕ್ಕೆ ಬೇಡ ಇತ್ತು.
ನಾನು ಕಲಿತ ಯಕ್ಷಗಾನ ನನ್ನಲ್ಲಿಯೇ ಉಳಿಯದೆ ಉಳಿದವರು ಯಕ್ಷಗಾನ ಕಲಿಯಬೇಕು ಎಂಬ ಉದ್ದೇಶದಿಂದ ಮೊದಲಿಗೆ ಶ್ರೀ ಗುಹೇಶ್ವರ ಯಕ್ಷಗಾನ ಕಲಾ ಸಂಘ, ಕೊಡಪಾಡಿ, ಗುಜ್ಜಾಡಿ ಸಂಘವನ್ನು ರಚಿಸಿ ನಂತರ ಸುಧೀರ್ ಪಿ ನಾಯ್ಕ ಜೊತೆಗೊಂಡು ಯಕ್ಷಮಿತ್ರ ಬಳಗ ಗುಜ್ಜಾಡಿ ತಂಡವನ್ನು ರಚಿಸಿ ಹಲವಾರು ಕಡೆ ವಿವಿಧ ಪ್ರಸಂಗವನ್ನು ಪ್ರದರ್ಶಿಸಿದ್ದೇವೆ. ಅಲ್ಲದೆ ಯಕ್ಷ ಚಿಗುರು ಎಂಬ ಮಕ್ಕಳ ಯಕ್ಷಗಾನ ತಂಡವನ್ನು ರಚಿಸಿ 50ರಿಂದ 70 ಮಕ್ಕಳಿಗೆ ಯಕ್ಷಗಾನ ಹೆಜ್ಜೆ ತರಗತಿಯನ್ನು ಮಾಡಿ ಪ್ರಸ್ತುತ ಗುಜ್ಜಾಡಿ ಶಾಲಾ ಮಕ್ಕಳಿಗೆ ಉಚಿತ ಯಕ್ಷಗಾನ ಕ್ಲಾಸ್ ಮಾಡುತ್ತ ಇದ್ದೇನೆ. ಇದಕ್ಕೆ ರಾಘವೇಂದ್ರ ಸಕ್ಕಟ್ಟು ಅವರ ಯೋಗ್ಯ ಸಲಹೆ ಕೂಡ ಕೊಟ್ಟಿದ್ದಾರೆ.
ಬೋಳಂಬಳ್ಳಿ, ಮೇಗರವಳ್ಳಿ, ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.
ಗುಜ್ಜಾಡಿ ಶಾಲಾ ವಾರ್ಷಿಕೋತ್ಸವದ ಸಂದರ್ಭ, ಹಾಗೂ ಬೀಜಾಡಿಯಲ್ಲಿ ಇವರನ್ನು ಗುರುತಿಸಿ ಸನ್ಮಾನ ಮಾಡಿರುತ್ತಾರೆ.
ಯೋಗೇಂದ್ರ ಆಚಾರ್ ಅವರು 10.05.2015 ರಂದು ನೀಲಾವತಿ ಅವರನ್ನು ಮದುವೆಯಾಗಿ ಮಗ ಅದ್ವಿತ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಯೋಗೇಂದ್ರ ಆಚಾರ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment