ಯಕ್ಷ ಸಾಧಕರು 357

"ಯಕ್ಷ ಕಲಾ ಚತುರೆ"

ಇವರ ಅಜ್ಜ ಸಂಜೀವ ಸಾಲ್ಯಾನ್, ತಂದೆ ಮತ್ತು ಚಿಕ್ಕಪ್ಪ  ಯತೀಶ್ ಯಕ್ಷಗಾನ ಕಲಾವಿದರು. ಸಣ್ಣ ವಯಸ್ಸಿನಿಂದ ಬಹಳಷ್ಟು ಯಕ್ಷಗಾನ ಪ್ರದರ್ಶನ ನೋಡಲು ಹೋಗುತ್ತಿದ್ದರು. ಬಹುಶಃ ಇದುವೇ ಯಕ್ಷಗಾನದ ಕಡೆ ಒಲವು ಹುಟ್ಟಿತು ಎಂದು ಹೇಳುತ್ತಾರೆ ಇವರು.



ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯ ಕಿನ್ಯಾ ಕಜೆಯ ದಯಾನಂದ ಹಾಗೂ ವಾರಿಜ ಇವರ ಮಗಳಾಗಿ 31.10.1999ರಂದು ಪ್ರತೀಕ್ಷಾ ದಯಾನಂದ ಪೂಜಾರಿ ಅವರ ಜನನ. ಬಿಕಾಂ ಇವರ ವಿದ್ಯಾಭ್ಯಾಸ. ಪ್ರಸ್ತುತ ದುಬೈನಲ್ಲಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಉದ್ಯೋಗದಲ್ಲಿದ್ದಾರೆ.

ಯಕ್ಷಗಾನ ಗುರುಗಳು:-
♦️ ಸೂರ್ಯನಾರಾಯಣ ಪದಕಣ್ಣಾಯ
♦️ ರವಿ ಅಲೆವೂರಾಯ
♦️ ದಯಾನಂದ ಪಿಲಿಕೂರ್
♦️ ಅಶ್ವಥ್ ಮಂಜನಾಡಿ

ನೆಚ್ಚಿನ ಪ್ರಸಂಗ ಹಾಗೂ ವೇಷಗಳು:-
ಶಶಿಪ್ರಭಾ ಪರಿಣಯ (ಶಶಿಪ್ರಭೆ), ಮಹಿಷ ಮರ್ದಿನಿ (ದೇವಿ), ದೇವಿಮಹಾತ್ಮೆ (ಮುಂಡ, ರಕ್ತಬೀಜ), ಶ್ರೀ ಕೃಷ್ಣ ಲೀಲಾಮೃತ (ಕೃಷ್ಣ, ಕಂಸ), ತರಣಿಸೇನ ಕಾಳಗ (ಸರಮೆ), ಭಾರ್ಗವ ವಿಜಯ (ಕಾರ್ತವೀರ್ಯಾರ್ಜುನ), ಷಣ್ಮುಖ ವಿಜಯ (ಷಣ್ಮುಖ, ರತಿ), ಬಬ್ರುವಾಹನ ಕಾಳಗ (ಬಬ್ರುವಾಹನ), ಸುದರ್ಶನ ವಿಜಯ (ಸುದರ್ಶನ).

ರಂಗಕ್ಕೆ ಹೋಗುವ ಮೊದಲು ಪದ್ಯ, ಪ್ರಸಂಗದ ನಡೆ ಹಾಗೂ ಸಂಭಾಷಣೆಯ ಬಗ್ಗೆ ಗುರುಗಳಲ್ಲಿ, ಭಾಗವತರಲ್ಲಿ ಹಾಗೂ ಸಹಕಲಾವಿದರೊಂದಿಗೆ ಚರ್ಚಿಸಿ ರಂಗ ಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಾರೆ ಪ್ರತೀಕ್ಷಾ.





ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಕಾಲದಲ್ಲಿಯೂ ಯಕ್ಷಗಾನವನ್ನು ಪ್ರೋತ್ಸಾಹಿಸುವವರು ಬಹಳಷ್ಟು ಜನರಿದ್ದಾರೆ. ಎಷ್ಟೋ ಹೆತ್ತವರು ತಮ್ಮ ಮಕ್ಕಳನ್ನು ಅತಿ ಸಣ್ಣ ವಯಸ್ಸಿನಲ್ಲಿ ಯಕ್ಷಗಾನ ತರಗತಿಗೆ ಸೇರಿಸಿ ಮಕ್ಕಳಲ್ಲಿ ಯಕ್ಷಗಾನದ ಕಡೆ ಒಲವು ಮೂಡಿಸುತ್ತಿದ್ದಾರೆ. ದುಬೈನಂತಹ ದೇಶಗಳಲ್ಲಿ ಕೂಡ ಜನರು ಯಕ್ಷಗಾನದ ಕಡೆ ಆಕರ್ಷಿತರಾಗಿದ್ದಾರೆ ಹಾಗೂ ಯಕ್ಷಗಾನ ಪ್ರೇಕ್ಷಕರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ಇದು ಸಂತೋಷದ ಸಂಗತಿ.
ಇಂದಿನ ಸಮಯದಲ್ಲಿ ಪ್ರೇಕ್ಷಕರು ಕಾಲಮಿತಿಯ ಯಕ್ಷಗಾನಕ್ಕೆ ಜಾಸ್ತಿ ಒತ್ತು ನೀಡುತ್ತಾರೆ ಎನ್ನುವುದು ನನ್ನ ಅಭಿಪ್ರಾಯ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳು:-
ಹತ್ತನೇ ವಯಸ್ಸಿನಲ್ಲಿ ಯಕ್ಷಗಾನ ಕಲಿಕೆಯನ್ನು ಪ್ರಾರಂಭಿಸಿ ಮುಂದುವರೆಸಿಕೊಂಡು ಬಂದಿದ್ದೇನೆ. ಇದೀಗ ನನ್ನ ಉದ್ಯೋಗಕ್ಕಾಗಿ ನಾನು ವಿದೇಶಕ್ಕೆ ಬರಬೇಕಾಯಿತು. ಭವಿಷ್ಯದಲ್ಲಿ ಮತ್ತೆ ಯಕ್ಷಗಾನ ಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಇಚ್ಚಿಸುತ್ತೇನೆ.






ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಯಕ್ಷಯಾನ 2020 ವಿಶ್ವವಿದ್ಯಾನಿಲಯ ಅಂತರ್ ಕಾಲೇಜು- ಸಮಗ್ರ ವೈಯಕ್ತಿಕ ಬಹುಮಾನ- ತೃತೀಯ.
♦️ ಪ್ರತಿಭಾ ಕಾರಂಜಿ - ಜಿಲ್ಲಾಮಟ್ಟ - ದ್ವಿತೀಯ.
♦️ ಕರಾವಳಿ ಉತ್ಸವ ಯಕ್ಷಗಾನ ಸ್ಪರ್ಧೆ - ದ್ವಿತೀಯ.
ಶಾಲಾ ಕಾಲೇಜುಗಳಲ್ಲಿ ಹಲವು ಕ್ರೀಡಾ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡು ಜಿಲ್ಲಾ ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ನೃತ್ಯ, ಸಂಗೀತ, ಪುಸ್ತಕ ಓದುವುದು ಹವ್ಯಾಸಗಳು.
ಸರಾಯು, ಮಂಜನಾಡಿ, ನಾದೋನ್ಮಯ, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕೇಶವ ಶಿಶು ಮಂದಿರ ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪ್ರತೀಕ್ಷಾ.



ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395