ಯಕ್ಷ ಸಾಧಕರು 355
"ಯಕ್ಷ ಕಲಾದೀಪ್ತ"
ಸಣ್ಣ ವಯಸ್ಸಿನಿಂದಲೂ ಯಕ್ಷಗಾನ ಎಂದರೆ ಪ್ರಾಣ. ಇವರ ತಂದೆಯವರ ಆಶಯದಂತೆ ತೀರ್ಥಹಳ್ಳಿ ಗೋಪಾಲ ಆಚಾರ್ಯರಂತಹ ಮೇರು ಕಲಾವಿದರಾಗಬೇಕೆಂಬ ಪ್ರೇರಣೆಯೊಂದಿಗೆ ಚಿಕ್ಕ ವಯಸ್ಸಿನಿಂದಲೂ ತೀರ್ಥಹಳ್ಳಿ ಗೋಪಾಲ ಆಚಾರ್ಯರನ್ನು ಅನುಸರಣೆ ಮಾಡಿಕೊಂಡು ಬಂದಿರುವ ಯುವ ಕಲಾವಿದ ದೀಪ್ತ ಆಚಾರ್ಯ ಕಿದಿಯೂರು.
ಉಡುಪಿ ಜಿಲ್ಲೆಯ ಕಿದಿಯೂರಿನ ಕೆ.ಜೆ.ಗಣೇಶ್ ಆಚಾರ್ಯ ಹಾಗೂ ಜಿ.ವಸಂತಿ ಆಚಾರ್ಯ ಇವರ ಮಗನಾಗಿ 29.12.2003 ರಂದು ಜನನ. ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ MBA ವ್ಯಾಸಂಗ ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:-
♦️ ಕೆ.ಜೆ.ಗಣೇಶ್,
♦️ ಕೆ.ಜೆ.ಕೃಷ್ಣ,
♦️ ಕೆ.ಜೆ.ಸುಧೀಂದ್ರ.
ನೆಚ್ಚಿನ ಪ್ರಸಂಗಗಳು:-
ರತ್ನಾವತಿ ಕಲ್ಯಾಣ, ಅಭಿಮನ್ಯು ಕಾಳಗ, ಬಬ್ರುವಾಹನ ಕಾಳಗ, ಜಾಂಬವತಿ ಕಲ್ಯಾಣ, ಚಕ್ರ ಚಂಡಿಕೆ, ಸುದರ್ಶನ ವಿಜಯ, ಶ್ರೀದೇವಿ ಮಹಾತ್ಮೆ.
ನೆಚ್ಚಿನ ವೇಷಗಳು:-
ಅಭಿಮನ್ಯು, ಬಬ್ರುವಾಹನ, ಭಸ್ಮಾಸುರ, ಬರ್ಭರೀಕ, ಭಾರ್ಗವರಾಮ.
ನೆಚ್ಚಿನ ಭಾಗವತರು:-
ರಸರಾಗ ಚಕ್ರವರ್ತಿ ದಿ. ಕಾಳಿಂಗ ನಾವುಡರು, ನನ್ನ ತಂದೆಯವರು, ಜನ್ಸಾಲೆ ರಾಘವೇಂದ್ರ ಆಚಾರ್ಯ, ಹೆರೆಂಜಾಲು ಗೋಪಾಲ ಗಾಣಿಗರು, ದಿ.ನಗರ ಸುಬ್ರಹ್ಮಣ್ಯ ಆಚಾರ್ಯ, ಪದ್ಯಾಣ ಗಣಪತಿ ಭಟ್, ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ವೇಷಧಾರಿಯಾಗಿ ಆ ಪಾತ್ರದ ಸ್ವಭಾವ, ಪದ್ಯಗಳು ಹಾಗೂ ಅದರ ಅರ್ಥಗಾರಿಕೆಯ ಬಗ್ಗೆ ತಂದೆ ಹಾಗೂ ಚಿಕ್ಕಪ್ಪನವರಲ್ಲಿ ತಿಳಿದುಕೊಂಡು ರಂಗ ಪ್ರವೇಶ ಮಾಡುತ್ತೇನೆ.
ಕೆಲವೊಂದು ವಿಶೇಷ ಪಾತ್ರಗಳು ಬಂದಾಗ ಅಭ್ಯಾಸ ಮಾಡಿಕೊಂಡು ಕೆಲವೊಂದು ಪಾತ್ರದ ಬಗೆಗಿನ ಮಾಹಿತಿಗಳನ್ನು ಶ್ರೇಷ್ಠ ಕಲಾವಿದರಾದ ಎಂ.ಕೆ.ರಮೇಶ ಆಚಾರ್ಯರಲ್ಲಿ ಕೇಳಿಕೊಂಡು ರಂಗಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡು ರಂಗ ಪ್ರವೇಶ ಮಾಡುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಕಾಲ ಕಾಲಕ್ಕೆ ತಕ್ಕಂತೆ ತುಂಬಾ ಬದಲಾವಣೆ ಇದೆ. ಯುವ ಪೀಳಿಗೆಯನ್ನು ಸೆಳೆಯುಲ್ಲಿ ಎಲ್ಲಾ ಪ್ರೇಕ್ಷಕರ ಮನ ತಣಿಸುವಲ್ಲಿ ತುಂಬಾ ಪ್ರಯತ್ನಶೀಲರಾಗಿ ಎಲ್ಲಾ ಕಲಾವಿದರು ಶ್ರಮಿಸುತ್ತಾ ಇದ್ದಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಉತ್ಸಾಹಕ ಪ್ರೇಕ್ಷಕರು, ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವಂತಹ ಪ್ರೇಕ್ಷಕರು.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನದ ಆಹಾರ್ಯದ ಕಲ್ಪನೆಯೇ ವಿಶೇಷ,
ಪ್ರೇಕ್ಷಕರ ಕಣ್ಣುಗಳನ್ನು ಸೆಳೆಯುವಂತಹ ವಿಶೇಷ ಕಲ್ಪನೆ, ಕಾಲಕ್ರಮೇಣ ಹೊಸ ಶೈಲಿಯಲ್ಲಿ ಆಹಾರ್ಯದ ಕ್ರಮಗಳು ಸೃಷ್ಟಿ ಆಯಿತು, ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಾ ಇದೆ, ಯಕ್ಷಗಾನದ ಚೌಕಟ್ಟಿನಲ್ಲಿಯೇ ಆಹಾರ್ಯದ ಮಾನ ವಿಸ್ತರಿಸುತ್ತಾ ಇದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಸಾಂಪ್ರದಾಯಿಕ ಪರಂಪರೆಯ ಹಳೆಯ ಕೆಲವು ಕ್ರಮಗಳು ರಂಗದಲ್ಲಿ ನಶಿಸಿ ಹೋಗಿದೆ. ನನ್ನ ತಂದೆ ಹಾಗೂ ಚಿಕ್ಕಪ್ಪನವರ ಮಾರ್ಗದರ್ಶನದಲ್ಲಿ ಪ್ರಸ್ತುತಿಪಡಿಸಬೇಕು. ಹಾಗೆಯೇ ಹೊಸ ವಿನೂತನ ಸಂಯೋಜನೆಯಲ್ಲಿ ಹೊಸ ಕ್ರಮದಲ್ಲಿ ಯಕ್ಷಗಾನದ ಚೌಕಟ್ಟಿನಲ್ಲಿ ಒಂದು ರೂಪಕ ಅಥವಾ ಯಕ್ಷಗಾನವನ್ನು ಪ್ರಸ್ತುತಿ ಪಡಿಸುವ ಯೋಜನೆ ಇದೆ.
ಸನ್ಮಾನ ಹಾಗೂ ಪ್ರಶಸ್ತಿ:-
♦️ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ. ಇದರ ಶತಮಾನೋತ್ಸವದ ಸಂಭ್ರಮದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
♦️ ಶ್ರೀ ಬ್ರಹ್ಮ ಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ(ರಿ.) ಕಿದಿಯೂರು ಇವರ ಸುವರ್ಣ ಮಹೋತ್ಸವದ ಪ್ರಯುಕ್ತ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
♦️ ಕಲಾಸಂಗಮ-ಪುರಸ್ಕಾರ.
♦️ ಕರ್ನಾಟಕ ಪ್ರತಿಭಾ ರತ್ನ.
♦️ ಜಿಲ್ಲಾ ಮಟ್ಟದ ಪ್ರಶಸ್ತಿ.
♦️ ಮಂಗಳೂರಿನ ಮಧುರ ತರಂಗ(ರಿ.) ಸಂಸ್ಥೆಯಿಂದ ಸನ್ಮಾನ.
♦️ ಉಡುಪಿಯ ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ಎಂಬ ಸಂಸ್ಥೆಯಿಂದ ಸನ್ಮಾನ.
♦️ ವಿಶ್ವಕರ್ಮ ಯುವಕ ಸೇವಾದಳದ ರಜತ ಮಹೋತ್ಸವದಲ್ಲಿ ಸನ್ಮಾನ.
ಚಿತ್ರ ಬಿಡಿಸುವುದು, ಕಥೆ ಓದುವುದು, ಚೆಸ್ ಇವರ ಹವ್ಯಾಸಗಳು.
ದೀಪ್ತ ಆಚಾರ್ಯ ಕಿದಿಯೂರು ಅವರು ಅತಿಥಿ ಕಲಾವಿದನಾಗಿ ಡೇರೆ ಮೇಳ ಹಾಗೂ ಇತರೆ ಮೇಳಗಳಲ್ಲಿ ವೇಷ ಹಾಗೂ ಹಿಮ್ಮೇಳದಲ್ಲಿಯೂ ಭಾಗವಹಿಸಿ ತಿರುಗಾಟ ಮಾಡಿದ ಅನುಭವ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ದೀಪ್ತ ಆಚಾರ್ಯ ಕಿದಿಯೂರು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment