ಯಕ್ಷ ಸಾಧಕರು 356

"ಯಕ್ಷ ಭ್ರಮರ"

ಮುಂಬೈನಲ್ಲಿ ಹುಟ್ಟಿ, ಮುಂಬೈ ಯೂನಿವರ್ಸಿಟಿಯಲ್ಲಿ
ಇಂಜಿನಿಯರಿಂಗ್ ಪದವಿ ಪಡೆದು, Loyola Institute ನಲ್ಲಿ Post graduate Business Analytics ನಲ್ಲಿ ಉನ್ನತ ಪದವಿ ಪಡೆದು ಪ್ರಸ್ತುತ FedEx Express Corporation ಕಂಪನಿಯಲ್ಲಿ ಉದ್ಯೋಗ ಮಾಡುತ್ತಾ ಯಕ್ಷಗಾನ ಹಾಗೂ ಚಿತ್ರಕಲೆಯಲ್ಲಿ ತಮ್ಮ ಪ್ರತಿಭೆ ಮೂಲಕ ಛಾಪು ಮಾಡಿಸುತ್ತಿರುವ ಕಲಾವಿದ ಮಾನಸ್  ಶೇಖರ್ ಶೆಟ್ಟಿ.

ಶೇಖರ್ ರಾಮಣ್ಣ ಶೆಟ್ಟಿ ಹಾಗೂ ವಾಣಿಶ್ರೀ ಶೇಖರ್ ಶೆಟ್ಟಿ ಇವರ ಮಗನಾಗಿ 09.09.1999 ರಂದು ಜನನ. ಬಾಲ್ಯದಲ್ಲಿ ಯಕ್ಷಗಾನ ಕ್ಯಾಸೆಟ್ ಹಾಗೂ ಡಿವಿಡಿಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ನೋಡುತ್ತಾ ಬೆಳೆದರು. ಆದರೆ ಮುಂಬಯಿಯಲ್ಲಿದ್ದ ಕಾರಣ ಹೆಚ್ಚು ಯಕ್ಷಗಾನ ನೋಡಲು ಸಿಗಲಿಲ್ಲ. ದೇವಸ್ಥಾನಗಳಲ್ಲಿ ಜಾತ್ರಾ ಸಮಯದಲ್ಲಿ ಮುಂಬೈಯ ಮಂಡಳಿಯ ಕಲಾವಿದರ ಆಟವನ್ನು ನೋಡುವುದಕ್ಕೆ ತಂದೆಯವರು ಕರೆದುಕೊಂಡು ಹೋಗುತ್ತಿದ್ದರು. ಇದು ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣಿಯಾಯಿತು.


ಯಕ್ಷಗಾನ ಗುರುಗಳು:-
ಶ್ರೀ ಕಟೀಲು ಸದಾನಂದ ಶೆಟ್ಟಿ,
ಶ್ರೀ ಶಂಭಯ್ಯ ಭಟ್ ಕಂಜಾರ್ಪಣೆ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ, ಜಾಂಬವತಿ ಕಲ್ಯಾಣ, ಗದಾಯುದ್ಧ , ರಕ್ತರಾತ್ರಿ, ಶ್ರೀ ಕೃಷ್ಣ ಪಾರಿಜಾತ, ಪಂಚವಟಿ.
ನೆಚ್ಚಿನ ವೇಷಗಳು:-
ರಕ್ತಬೀಜ, ಶ್ರೀ ದೇವಿ, ಅರುಣಾಸುರ, ಭಸ್ಮಾಸುರ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪದ್ಯಗಳನ್ನು ಓದಿ ತಿಳಿದು ಕಥೆಯನ್ನು ಚೆನ್ನಾಗಿ ಅರ್ಥವಿಸಿಕೊಂಡು ಪಾತ್ರಕ್ಕೆ ಅನುಗುಣವಾದ ಗ್ರಂಥ ಪುಸ್ತಕಗಳಲ್ಲಿ ಅದರ ವಿವರಣೆಗಳನ್ನು ಓದುವುದು. ಉದಾಹರಣೆಗೆ ದೇವಿ ಮಹಾತ್ಮೆಯ ಕಥೆ ಇದ್ದರೆ ಶ್ರೀ ದುರ್ಗಾ ಸಪ್ತಶತಿಯ ಶ್ಲೋಕವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಕೊಂಡು, ನಾನು ಬಹಳ ಕಿರಿಯ ಕಲಾವಿದ ಆಗಿರುವುದರಿಂದ ಯಾವಾಗಲೂ ಹಿರಿಯರಲ್ಲಿ ಆದಷ್ಟು ಅರ್ಥಗಾರಿಕೆಯ ಬಗ್ಗೆ ವಿಚಾರಗಳನ್ನು ಸಂಗ್ರಹ ಮಾಡುವ ಪ್ರಯತ್ನ ಮಾಡುತ್ತೇನೆ. ನನಗೆ ಹಲವು ಪಾತ್ರಗಳ ಅರ್ಥಗಾರಿಕೆಯಲ್ಲಿ ಶ್ರೀ ವಾಸುದೇವ್ ಶೆಟ್ಟಿ ಮಾರ್ನಾಡ್ ಇವರು ಮಾರ್ಗದರ್ಶನ ಕೊಟ್ಟಿದ್ದಾರೆ. ಅಂತೆಯೇ ಶ್ರೀ ಮಹೇಶ್ ಕುಮಾರ್ ಸಾಣೂರು, ಶ್ರೀ ಶಿವಾನಂದ ಶೆಟ್ಟಿ ಪೆರ್ಲ ಇವರು ಸಹಾಯ ಮಾಡಿದ್ದಾರೆ. ಹಾಗೆ ಚೌಕಿಮನೆಗೆ ಬಂದು ವಿಧವಿಧದ ವೇಷಗಳಲ್ಲಿ ಬಣ್ಣಗಾರಿಕೆಯನ್ನು ಸ್ಪಷ್ಟವಾಗಿ ಹಾಗೂ ಪಾತ್ರವನ್ನು ಗುರುತಿಸುವ ಹಾಗೆ ಮಾಡುವಲ್ಲಿ ನನಗೆ ಪೂರಕವಾಗಿ ಮಾರ್ಗದರ್ಶನ ನೀಡಿದವರು ಶ್ರೀ ಗೋವಿಂದ ಸಪಲಿಗ ಮತ್ತು ಶ್ರೀ ನಿಶಿತ್ ಸುವರ್ಣ. ರಂಗಪ್ರವೇಶ ಮಾಡುವ ಮೊದಲು ಚೌಕಿ ದೇವರಿಗೆ ನಮಸ್ಕರಿಸಿ ಚೌಕಿಯ ಹಿರಿಯ ಕಲಾವಿದರಲ್ಲಿ ಅಪ್ಪಣೆ ಪಡೆದು, ಭಾಗವತರನ್ನು ನಮಸ್ಕರಿಸಿ ರಂಗಸ್ಥಳ ಪ್ರವೇಶ ಮಾಡುತ್ತೇನೆ.




ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ನಾನೊಂದು ಪೂರ್ಣ ಪ್ರಮಾಣದ ಯಕ್ಷಗಾನ ಕಲಾವಿದ ಅಲ್ಲ, ಯಾಕೆಂದರೆ ಇನ್ನೂ ಕಲಿಯುವುದಕ್ಕೆ ತುಂಬಾ ಇದೆ. ಆದರೆ ನಾನು ದೊಡ್ಡ ಯಕ್ಷಗಾನ ಕಲೆಯ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಕಟೀಲು ಮೇಳಗಳ ಪತ್ತನಾಜೆಯ ಸೇವೆಯ ಆಟಕ್ಕೆ ಮುಂಬೈಯಿಂದ ಟ್ರೈನಲ್ಲಿ ಊರಿಗೆ ಬಂದು ಆಟ ನೋಡಿ ಮರುದಿನ ಪುನಃ ಮುಂಬೈಗೆ ಹೋಗುತ್ತಿದ್ದೆ. ಕಟೀಲು ಮೇಳದ ಆಟ ಮುಂಬೈಯಲ್ಲಿ ಇದ್ದ ಸಂದರ್ಭ ನಮ್ಮ ಆಟವನ್ನು ಮುಗಿಸಿ ವೇಷ ತೆಗೆದು ನೇರ ಬಂಟರ ಸಂಘಕ್ಕೆ ಕಟೀಲು ಮೇಳದ ಕಲಾವಿದರ ಆಟ ನೋಡಿ ಮಂಗಲ ಪದ್ಯದ  ಬಳಿಕ ಮನೆಗೆ ರಾತ್ರೆ ೩ ಗಂಟೆಗೆ ಹೋಗಿದ್ದೇನೆ. ಕಲಾವಿದರ video ಮಾಡಿ ಪ್ರೇಕ್ಷಕರಿಗೆ ಸೇರುವುದುಕ್ಕಾಗಿ “rangaa.nayakaa” ಎಂಬ Instagram page ಆರಂಭ ಮಾಡಿದ್ದೇನೆ. ಯಾವುದೇ ಕಲೆ ಉಳಿಯಬೇಕಾದರೆ ಕಲಾಭಿಮಾನಿಗಳ ಅಗತ್ಯವಿದೆ. ಕಲಾಭಿಮಾನಿಗಳಿದ್ದರೆ ಕಲೆಗೆ ಬದುಕು ಇದೆ ಮತ್ತು ಅದರಿಂದ ಕಲಾವಿದರಿಗೆ ಬದುಕುವುದಕ್ಕೆ ಸಾಧ್ಯವಿದೆ. ಹಾಗಿರುವಾಗ ಇವತ್ತಿನ ಆಧುನಿಕ ದಿನಗಳಲ್ಲಿ ಯಕ್ಷಗಾನ ಪ್ರದರ್ಶನ ನೋಡಲು ಬರುವ ಎಲ್ಲಾ ಪ್ರೇಕ್ಷಕರಿಗೆ ನಾನು ಚಿರಋಣಿ ಆಗಿದ್ದೆನೆ. ಆದರೆ ಮುಂದಿನ ಕಾಲದಲ್ಲಿ ಪ್ರೇಕ್ಷಕವರ್ಗ ಎಷ್ಟು ಉಳಿಯುತ್ತದೆ ಎಂದು ಸಂಶಯ. ಒಂದು ದಿನ ಒಂದು ತಾಳಮದ್ದಳೆಗೆ ಹೋಗಿದ್ದೆ. ಅಲ್ಲಿ ನನ್ನನ್ನು ಒಬ್ಬ ಬಿಟ್ಟರೆ ಉಳಿದವರು ಎಲ್ಲರು 100% ಸೀನಿಯರ್ ಸಿಟಿಜನ್. ಕಾಲಾಯ ತಸ್ಮೈ ನಮಃ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹವ್ಯಾಸಿ ಕಲಾವಿದನಾಗಿ ಹಿರಿಯ ಕಲಾವಿದರಿಂದ ಆದಷ್ಟು ವಿಚಾರಗಳನ್ನು ಸಂಗ್ರಹಿಸಿ ಮುಂದಿನ ಮಕ್ಕಳಿಗೆ ಯಕ್ಷಗಾನದ ಬಗ್ಗೆ ಗೌರವ ಭಾವ ಬರುವಂತೆ ಮಾಡಬೇಕು. ದೇವರ ಕರುಣೆ ಇದ್ದರೆ ಮುಂದೆ ಬೇರೆ ಕಲಾವಿದರಿಗೆ ಸಹಾಯ ಮಾಡಿ ಆದಷ್ಟು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಕೊಡುವಂತ ಸಾಮರ್ಥ್ಯ ಆರ್ಥಿಕವಾಗಿ ಹಾಗೂ ದೈಹಿಕವಾಗಿ ದೇವರು ಕರುಣಿಸಲಿ ಎಂದು ನಾನು ಬಯಸುತ್ತೇನೆ.
ಒಂದು ದಿನ ಕಟೀಲು ಮೇಳದಲ್ಲಿ ಸೇವೆ ಮಾಡುವ ಒಂದು ಸಣ್ಣ ಆಸೆ.

ಚಿತ್ರ ಕಲೆ ಕಲಿಯಲು ಪ್ರೇರಣೆ:-
ಬಾಲ್ಯದಿಂದಲೇ ಪೆನ್ಸಿಲ್ ಹಿಡಿದು ಗಣಪತಿಯ ಚಿತ್ರಗಳನ್ನು ಮಾಡಿದ ನೆನಪುಂಟು. ಮತ್ತೆ ಶಾಲೆ ಸೇರಿದಾಗ ಅಲ್ಲಿ ನನಗೆ ಗುರುವಾಗಿ ಶ್ರೀ ರೋಹಿತ್ ದೇಸಾಯಿ ನನಗೆ ಬೇಕಾದ ವಿದ್ಯೆ ಕೊಟ್ಟು ಆದಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಡಲ್ ಹಾಗೂ ಟ್ರೋಫಿ ಸಿಗುವಂತೆ ಬೆಂಬಲ ನೀಡಿದ್ದಾರೆ. ಶಾಲೆ ಮುಗಿದ ಮೇಲೆ ನಾನು ಇಂಜಿನಿಯರಿಂಗ್ ವಿದ್ಯಾಭ್ಯಾಸ ಸಂದರ್ಭದಲ್ಲಿ ಚಿತ್ರಕಲೆಯನ್ನು ನಾನು ಬಿಡಲಿಲ್ಲ ಹಾಗೂ ಆ ಕಲಾಮಾತೆಯು ನನ್ನ ಕೈ ಬಿಡಲಿಲ್ಲ. ಹಲವು ದೇವತೆಗಳ ಹಾಗೂ ಮಂದಿರದ ಶಿಲ್ಪಗಳ ಚಿತ್ರವನ್ನು ಬಿಡಿಸುವುದು ನನಗೆ ತುಂಬಾ ಖುಷಿಯ ವಿಚಾರ. ಈ ಹಿಂದೆ ನನ್ನ ಚಿತ್ರಗಳನ್ನು ಆಧಾರವಾಗಿ ಇಟ್ಟುಕೊಂಡು ಕ್ಯಾಲೆಂಡರ್ ಹಾಗೂ ಡೈರಿ ಪಬ್ಲಿಶ್ ಮಾಡಿ ದೇಶ ವಿದೇಶದಲ್ಲಿ ಸೇಲ್ ಆಗಿದೆ. ಇತ್ತೀಚಿಗೆ ಒಂದು ಉಡುಪಿ ರೆಸ್ಟೋರೆಂಟಲ್ಲಿ ಉಡುಪಿಯ ವೈವಿಧ್ಯತೆ - ಮಂದಿರ, ಯಕ್ಷಗಾನ, ಹುಲಿವೇಷ ಇತ್ಯಾದಿಯನ್ನು ಚಿತ್ರಿಸಿದ್ದೇನೆ.

ಚಿತ್ರಕಲೆಯ ಇಂದಿನ ಸ್ಥಿತಿ ಗತಿ:-
ಇಂದಿನ ಕಾಲದಲ್ಲಿ ಚಿತ್ರಕಲೆಯಲ್ಲಿ ಮಾಡರ್ನ್ ಆರ್ಟ್ ಎಂಬ ಹೆಸರಲ್ಲಿ ಕೇವಲ 2 ರೇಖೆಗಳು ಬಿಡಿಸಿ ಅದಕ್ಕೆ ಲಕ್ಷ ಲಕ್ಷ ಹಣ ಕೊಟ್ಟು ತನ್ನ ಮನೆಯಲ್ಲಿ ಇಡುವವರು ಇದ್ದಾರೆ. ಅದಕ್ಕಿಂತ ಬಡತನದಲ್ಲಿ ದಿನ ಕಳೆಯುವಂತ ನಿಜವಾದ ಪ್ರತಿಭಾವವಂತ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಟ್ಟರೆ ನಮ್ಮ ದೇಶದಲ್ಲಿ ಚಿತ್ರಗಾರರಿಗೆ ಹಾಗೂ ಕಲಾವಿದರಿಗೆ ಗೌರವದ ಜೀವನ ಸಿಗಬಹುದು.








ನೀವು ಮಾಡಿರುವ ಪೈಂಟಿಂಗ್ಸ್ ಹಾಗೂ ಡ್ರಾಯಿಂಗ್ ಅನ್ನು ಪ್ರದರ್ಶನ ಮಾಡುವ ಯೋಜನೆ ಇದೆಯಾ:-
ಇಷ್ಟರವರೆಗೆ ನಾನು ಮಾಡಿದ ಹಲವು ಚಿತ್ರಗಳು ಮೊದಲು ಆರ್ಡರ್ ಬಂದ ಮೇಲೆ. ಆದರೆ ನಾನು ನನಗಾಗಿ ಮಾಡಿದಂತಹ ಚಿತ್ರಗಳು ಕಡಿಮೆ. ನಾನು ಬೇರೆ ವ್ಯವಸಾಯದಲ್ಲಿ ತೊಡಕಿದ ಕಾರಣ ಸಮಯದ ಮಿತಿ ಇರುತ್ತದೆ. ಹಾಗಾಗಿ ಸ್ವಲ್ಪ ದಿನ ಕೇವಲ ತನ್ನ ಆಸೆಯಂತೆ ಚಿತ್ರ ಬಿಡಿಸಿ ಆ ಮೇಲೆ ಪ್ರದರ್ಶನ  ಮಾಡುವ ಯೋಚನೆಯಲ್ಲಿದ್ದೇನೆ.

ಭ್ರಾಮರಿ ಯಕ್ಷ ನೃತ್ಯ ಕಲಾನಿಲಯ,
ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮತ್ತು  ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡಿದ ಅನುಭವ.
ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಭ್ರಮರ ಕಲಾ ಪ್ರಶಸ್ತಿ.
♦️ ಒಡಿಯೂರು ಸ್ವಾಮಿಯವರ ಷಷ್ಠ್ಯಬ್ಧಿ ಸಂಭ್ರಮದಲ್ಲಿ ಜ್ಯಾನವಾಹಿನಿ ಪುರಸ್ಕಾರ.
♦️ ನವಿ ಮುಂಬೈ ಟ್ರಾಫಿಕ್ ಪೊಲೀಸ್ ಡಿಪಾರ್ಟ್ಮೆಂಟ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಮಾನಸ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Manas Shetty Instgram Page

Rangaa Nayakaa Instgram Page

ಮಾನಸ್ ಶೇಖರ್ ಶೆಟ್ಟಿ ಅವರ ಪೈಂಟಿಂಗ್ಸ್ ಹಾಗೂ ಡ್ರಾಯಿಂಗ್

















Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395