ಯಕ್ಷ ಸಾಧಕರು 358

"ಯಕ್ಷ ಕುವರ"

ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆಯ ವಿಶ್ವನಾಥ್ ಬಂಜನ್ ಹಾಗೂ ಕುಶಲಾಕ್ಷಿ ಅವರ ಮಗನಾಗಿ 16.06.2004ರಂದು ವೈಶಾಖ್ ಕುಲಾಲ್ ಸೂರಿಂಜೆ ಅವರ ಜನನ. B.C.A ಇವರ ವಿದ್ಯಾಭ್ಯಾಸ.



ಯಕ್ಷಗಾನ ಗುರುಗಳು:-
ರಾಮಚಂದ್ರ ಮುಕ್ಕ, ಜಿತೇಶ್ ಸೂರಿಂಜೆ, ಪ್ರಸ್ತುತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ.
ನೃತ್ಯ ಗುರುಗಳು:-
ಕಾರ್ತಿಕ್ ಕುಲಾಲ್ ಕುಳಾಯಿ.
ನಾಟಕ ಗುರುಗಳು:-
ನಾಗೇಶ್ ಕುಲಾಲ್.

ಮೊದಲನೆಯದಾಗಿ ನಾಗೇಶ್ ಕುಲಾಲ್ ಸಾರಥ್ಯದ ಕಲಾಕುಂಭ  ಸಾಂಸ್ಕೃತಿಕ ವೇದಿಕೆ ಕುಳಾಯಿ ಇದರಲ್ಲಿ 450 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲು ಪಡೆದ ಹೆಮ್ಮೆ ಹಾಗೂ ಈ ವೇದಿಕೆ ನನಗೆ ಯಕ್ಷರಂಗಕ್ಕೆ ಬರಲು ಅನುಕೂಲವಾಯಿತು.
ತಂದೆ, ತಾಯಿ, ಗುರುಗಳಾದ ನಾಗೇಶ್ ಕುಲಾಲ್ ಅವರ ಶಿಸ್ತಿನ ಅಭ್ಯಾಸ ಹಾಗೂ ಯಕ್ಷಗಾನ ಕಲೆಯ ಕಲಾ ವೈಭವ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.

ನೆಚ್ಚಿನ ಪ್ರಸಂಗ:-
ಅಗ್ರಪೂಜೆ, ನರಕಾಸುರ ಮೋಕ್ಷ, ಕಂಸ ವಧೆ ಇತ್ಯಾದಿ.
ನೆಚ್ಚಿನ ವೇಷ:-
ನರಕಾಸುರ, ಶತ್ರುಪ್ರಸೂದನ, ಕಂಸ, ಶುಂಭ, ಶಿಶುಪಾಲ, ಮಹಿಷಾಸುರ.

ರಂಗಕ್ಕೆ ಹೋಗುವ ಮೊದಲು ಪದ್ಯ, ಪ್ರಸಂಗದ ಕಥೆ, ಪಾತ್ರದ ಸ್ವಭಾವ, ಅರ್ಥಗಾರಿಕೆಯನ್ನು ಅಧ್ಯಯನ ಮಾಡುತ್ತೇನೆ. ಭಾವಾಭಿನಯ, ನೃತ್ಯ, ಹಾಗೂ ತಾಳಬದ್ಧವಾಗಿ ಅಭ್ಯಾಸ ಮಾಡುತ್ತೇನೆ. ವೇಷಭೂಷಣ ಹಾಗೂ ಬಣ್ಣಗಾರಿಕೆಯನ್ನು ಸಿದ್ಧಪಡಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಆಕರ್ಷಿಸುವಂತೆ ಮಾಡಿ ಆತ್ಮ ವಿಶ್ವಾಸದಿಂದ ರಂಗ ಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಾರೆ ವೈಶಾಖ್.






ನೃತ್ಯ ಹಾಗೂ ನಾಟಕ ಯಕ್ಷಗಾನ ರಂಗದಲ್ಲಿ ಪಾತ್ರ ಮಾಡುವಾಗ ಯಾವ ರೀತಿಯಲ್ಲಿ ಸಹಕಾರಿಯಾಗಿದೆ:-
♦️ ನಾಟಕದಿಂದ ಮುಖಭಾವ, ಹಾವಭಾವಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.
♦️ ನೃತ್ಯವು ದೇಹದ ಚಲನೆ, ನಿಲ್ಲುವ ಭಂಗಿ, ವೇದಿಕೆಯಲ್ಲಿ ನಿಲ್ಲುವ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಯಕ್ಷಗಾನದ ಇಂದಿನ ಸ್ಥಿತಿಗತಿ:-
ಯಕ್ಷಗಾನವು ಇಂದು ಕಾಲಮಿತಿಯಲ್ಲಿ ನಡೆಯುತ್ತಾ ಇದೆ. ಹಿಂದಿನ ಪರಂಪರೆಯು ಈಗ ಮರೆಮಾಚುತ್ತಾ ಇದೆ. ಜನರಿಗೆ ಸಿನಿಮಾ, ಸಾಮಾಜಿಕ ಮಾಧ್ಯಮ, ಯೂಟ್ಯೂಬ್ ಗಳ ಒಲವು ಜಾಸ್ತಿಯಾಗಿ ಯಕ್ಷಗಾನದ ಮೇಲೆ ಜನರ ಆಕರ್ಷಣೆ ಕಡಿಮೆ ಆಗಿದೆ. ಯಕ್ಷಗಾನವು ಶ್ರೇಷ್ಠ ಜನಪದ ಕಲೆಯಾಗಿ ಮುಂದಿನ ಪೀಳಿಗೆಗೂ ಉಳಿಯಲು ನಾವು ಪಾಲ್ಗೊಳ್ಳುವುದು ಅವಶ್ಯಕವಾಗಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಹಿರಿಯರು ಈ ಕಲೆಯನ್ನು ಬೆಳೆಸುವುದರ ಜೊತೆಗೆ ಯಕ್ಷಗಾನದ ಪರಂಪರೆಯನ್ನು ಉಳಿಸಿಕೊಂಡು ಬಂದಿರುತ್ತಾರೆ. ಆದರೆ ಈಗ ಪ್ರೇಕ್ಷಕರ ಸಂಖ್ಯೆ ಕುಗ್ಗುವ ಪರಿಸ್ಥಿತಿ ಉಂಟಾಗುತ್ತದೆ. ಪ್ರೇಕ್ಷಕರ ಅತ್ಯುನ್ನತ ಬೆಂಬಲವೇ ಯಕ್ಷಗಾನದ ಬೆಳವಣಿಗೆಗೆ ಸ್ಫೂರ್ತಿ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನದ ಹಿಂದಿನ ಪರಂಪರೆ ಉಳಿಯಬೇಕು. ಬಣ್ಣಗಾರಿಕೆ ಮತ್ತು ವೇಷಭೂಷಣ ಶಿಸ್ತುಬದ್ಧವಾಗಿರಬೇಕು. ನಾಟ್ಯ ಹೆಜ್ಜೆಗಳು ಪರಿಪೂರ್ಣವಾಗಿರಬೇಕು. ಪರಿಪೂರ್ಣ ಯಕ್ಷಗಾನ ನಾಟ್ಯ ಗುರುಗಳಿಂದ ತರಬೇತಿ ಪಡೆದು ಯಕ್ಷರಂಗವನ್ನು ಪ್ರವೇಶಿಸಬೇಕು. ಮೂಲ ಶೈಲಿಯ ಯಕ್ಷಗಾನವನ್ನು ನೀಡುವ ಮೂಲಕ ಜಾಗೃತಿ ಮೂಡಿಸಿ ಮುಂದಿನ ಪೀಳಿಗೆಗೂ ಈ ಪರಂಪರೆಯನ್ನು ಉಳಿಸುವುದು ನನ್ನ ಧ್ಯೇಯವಾಗಿದೆ.




ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಬಣ್ಣದ ವೇಷದಲ್ಲಿ ಬಣ್ಣದ ವೇಷಧಾರಿಯಾಗಿ ಮಿಂಚುವ ಹಾಗೂ ಹಿಂದಿನ ಪರಂಪರೆ ಶೈಲಿಯ ನಾಟ್ಯದಲ್ಲಿ ಪರಿಣತಿಯನ್ನು ಪಡೆಯುವ ಉದ್ದೇಶವಾಗಿದೆ. ಹಾಗೆಯೇ ನಾನು ನನ್ನ ಗುರುಗಳಂತೆ ಆಗಬೇಕೆಂಬ ಮನದಾಸೆಯನ್ನು ಹೊಂದಿದ್ದೇನೆ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಯವರಿಗೂ ಕಲಿಸುವ ಮುಖಾಂತರ ಯಕ್ಷಗಾನವು ಮುಂದಿನವರೆಗೂ ಉಳಿಯುವ ಹಾಗೆ ಶ್ರಮಿಸುತ್ತೇನೆ. ಎಲ್ಲರಿಗೂ ಈ ಕಲೆಯನ್ನು ಪ್ರೀತಿಯಿಂದ ಕಲಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸುತ್ತೇನೆ.

ಸನ್ಮಾನ ಹಾಗೂ ಪ್ರಶಸ್ತಿ.
♦️ 2023 ನ್ಯಾಷನಲ್ ಲೆವೆಲ್ folk orchestra ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ಪಂಜಾಬಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲು ಪಡೆದ ಹೆಮ್ಮೆ.
♦️ ಯೂನಿವರ್ಸಿಟಿಯಲ್ಲಿ ನಡೆದ ನಾಟಕ ಪ್ರಥಮ ಪ್ರಶಸ್ತಿ. Southzone ನಾಟಕ ಸ್ಪರ್ಧೆಯಲ್ಲಿ ತೃತೀಯ ಪ್ರಶಸ್ತಿ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.
♦️ ಪಟ್ಲ ಸಂಭ್ರಮ 2023ರಲ್ಲಿ ನಡೆದ 23 ಕಾಲೇಜಿನ ಯಕ್ಷಗಾನ ಸ್ಪರ್ಧೆಯಲ್ಲಿ ಬಣ್ಣದ ವೇಷ ಪ್ರಥಮ ಹಾಗೂ ತಂಡ ಶ್ರೇಷ್ಠ ಪ್ರಶಸ್ತಿ.
♦️ ನಿಟ್ಟೆ 2024 "ನಿಟ್ಟೆ ಯಕ್ಷಗವಿಷ್ಠಿ" ಯಕ್ಷಗಾನ ಸ್ಪರ್ಧೆಯಲ್ಲಿ ಬಣ್ಣದ ವೇಷದಲ್ಲಿ ಉತ್ತಮ ತಮಾಲಕೇತು ಪ್ರಶಸ್ತಿ.
♦️ ಇರಾ ಯಕ್ಷೋತ್ಸವ 2024ರ ಉತ್ತಮ ಬಣ್ಣದ ವೇಷ ಪ್ರಶಸ್ತಿ.
♦️ 2024 SDM ಕಾಲೇಜು ಯಕ್ಷೋತ್ಸವದಲ್ಲಿ ಉತ್ತಮ ಬಣ್ಣದ ವೇಷ ಪ್ರಥಮ ಹಾಗೂ ತಂಡ ಶ್ರೇಷ್ಠ ಪ್ರಶಸ್ತಿ.
♦️ 2024 ವಾಮಂಜೂರು ಕೃಷಿ ಮೇಳ ಯಕ್ಷಗಾನ ಸ್ಪರ್ಧೆಯಲ್ಲಿ ಬಣ್ಣದ ವೇಷದಲ್ಲಿ ದ್ವಿತೀಯ ಪ್ರಶಸ್ತಿ.
♦️ ಯಕ್ಷೋತ್ಸವ 2025 SDM ಕಾಲೇಜಿನ ಸ್ಪರ್ಧೆಯಲ್ಲಿ ಬಣ್ಣದ ವೇಷದಲ್ಲಿ ಪ್ರಥಮ ಪ್ರಶಸ್ತಿ.
♦️ ನಿಟ್ಟೆ ಯಕ್ಷ ಗವಿಷ್ಠಿ 2025 ಯಕ್ಷೋತ್ಸವದಲ್ಲಿ ಬಣ್ಣದ ವೇಷದಲ್ಲಿ ದ್ವಿತೀಯ ಪ್ರಶಸ್ತಿ.
♦️ 2025 ಸಂಪಾಜೆ ಯಕ್ಷೋತ್ಸವದಲ್ಲಿ ಬಣ್ಣದ ವೇಷದಲ್ಲಿ ತೃತೀಯ ಪ್ರಶಸ್ತಿ.







ಯಕ್ಷಗಾನ, ನಾಟಕ, ಕಾರ್ಯಕ್ರಮ ನಿರೂಪಣೆ, ಭಜನೆ, ಬಣ್ಣಗಾರಿಕೆ ಇವರ ಹವ್ಯಾಸಗಳು.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ವೈಶಾಖ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395