ಯಕ್ಷ ಸಾಧಕರು 360

"ಉತ್ಸಾಹೀ ಕಲಾಸಂಪನ್ನ"

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಕುಳಾಯಿಯ ದಿl ಕೃಷ್ಣ HPCL ಮತ್ತು ಶ್ರೀಮತಿ ಗೀತಾ ಇವರ ಮಗನಾಗಿ 31.05.1996ರಂದು ಅಕ್ಷಯ್ ಕುಮಾರ್ ಕುಳಾಯಿ ಅವರ ಜನನ. ಮಂಗಳೂರಿನ ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯ ಬಿಇ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ.

ಚಿಕ್ಕವನಿಂನಿಂದಲೂ ನೃತ್ಯ ಅಭಿನಯ  ಚಿತ್ರಕಲೆ  ಭಜನೆ ಮುಂತಾದ ಕ್ಷೇತ್ರದಲ್ಲಿ ಆಸಕ್ತಿ. ಯಕ್ಷಗಾನ ಕಲಿಯಬೇಕು ಎಂಬ ಆಸೆ, ಆದರೆ ಫ್ಯಾಮಿಲಿಯಲ್ಲಿ ಯಕ್ಷಗಾನದ ಯಾವುದೇ ಹಿನ್ನಲೆ ಇಲ್ಲದ ಕಾರಣ ಅದು ಕನಸಾಗಿಯೇ ಉಳಿಯಿತು. ಕಲಾಕುಂಭ ಸಾಂಸ್ಕೃತಿಕ ವೇದಿಕೆಯಲ್ಲಿ  ಯಕ್ಷಗಾನ ಕ್ಲಾಸ್ ಮಾಡುತ್ತಾರೆ ಎಂದಾಗ ಇವರ ಕನಸಿಗೆ ಜೀವ ಬಂತು. ಎಲ್ಲಾ ವಿಷಯಗಳ ಬಗ್ಗೆ ತಕ್ಕ ಮಟ್ಟಿಗೆ ತಿಳಿದಿದ್ದರಿಂದ ಯಕ್ಷಗಾನದ ಆಸಕ್ತಿ ಸ್ವಾಭಾವಿಕವಾಗಿ ಹೆಚ್ಚಿತು. ಅದಕ್ಕಾಗಿ ಕಲಾಕುಂಭ  ವೇದಿಕೆಯ ನಾಗೇಶ್ ಕುಲಾಲ್ ಅವರಿಗೆ ಧನ್ಯವಾದ.

ಯಕ್ಷಗಾನ ಗುರುಗಳು:-
♦️ ಶ್ರೀ ಜೀತು ಸೂರಿಂಜೆ
♦️ ಶ್ರೀಮತಿ ಪೂರ್ಣಿಮಾ ಯತೀಶ್ ರೈ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ , ಶಶಿಪ್ರಭಾ ಪರಿಣಯ,  ಜಾಂಬವತಿ  ಕಲ್ಯಾಣ,  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ.
ನೆಚ್ಚಿನ ವೇಷಗಳು:-
ವಿದ್ಯುನ್ಮಾಲಿ, ಚಂಡಮುಂಡ, ಧೂಮ್ರಾಕ್ಷ, ಶಂಖಾಸುರ, ಮಾರ್ತಾಂಡತೇಜ, ಈಶ್ವರ, ಹನುಮಂತ, ಸುಪಾರ್ಶ್ವಕ ಮುನಿ, ದುರ್ಗಾರಕ್ತ, ದಂತವಕ್ತ್ರ, ಶತ್ರುಪ್ರಸೂದನ, ಮುರಾಸುರ, ನರಕಾಸುರ, ಜಮದಗ್ನಿ.
ರಾಜವೇಷ ಪುಂಡುವೇಷಗಳಲ್ಲಿ ಆಸಕ್ತಿ  ಜಾಸ್ತಿ. ಅಲ್ಲದೆ  ಜಾಂಬವಂತ ಮತ್ತು ಸುದರ್ಶನ ಮಾಡಬೇಕೆಂಬ ಆಸೆಯಿದೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗ ತಿಳಿದ ನಂತರ ವೇಷದ ಬಗ್ಗೆ ಗುರುಗಳಲ್ಲಿ ಕೇಳುತ್ತೇವೆ. ಅವರಿಂದ ಕೆಲವು ಮಾಹಿತಿ ಪಡೆದು ಮತ್ತು ಹಿಂದಿನ ಪ್ರಸಂಗ ನೋಡಿ ಅಥವ ಈಗಿನ ಸಾಮಾಜಿಕ ಜಾಲತಾಣದಲ್ಲಿ ನೋಡಿ ಏನಾದರೂ ವೆರೈಟಿಯಾಗಿ ಅಥವ ನಮ್ಮ ಹೊಸತನ ಏನಾದರು ಜೋಡಿಸಿಕೊಳ್ಳುತೇವೆ. ಸಂದರ್ಭಕ್ಕೆ ಅನುಸಾರವಾಗಿ ಅರ್ಥಗಾರಿಕೆ ಮಾಡುತ್ತೇನೆ. ಈಗ ಕಲಿಯುವ ಮಕ್ಕಳಿಗೂ ಪ್ರಸಂಗದ ಸಂದರ್ಭ ಅರ್ಥೈಸಿಕೊಳ್ಳಬೇಕು ಕಂಠಪಾಠ ಮಾಡಬಾರದು ಎಂದು ಹೇಳುತ್ತೇನೆ.

ನೃತ್ಯ ಹಾಗೂ ನಾಟಕ ಯಕ್ಷಗಾನ ರಂಗದಲ್ಲಿ ಪಾತ್ರ ಮಾಡುವಾಗ ಯಾವ ರೀತಿಯಲ್ಲಿ ಸಹಕಾರಿಯಾಗಿದೆ:-
ಖಂಡಿತವಾಗಿ, ನೃತ್ಯ ನಾಟಕ ಯಕ್ಷಗಾನ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಬಳಸಿ ಕೊಂಡಿದ್ದೇನೆ. ನೃತ್ಯದ ತಾಳಜ್ಞಾನ, ವೆರೈಟಿ ಹೆಜ್ಜೆಗಳು, ನಾಟಕದ ಮಾತುಗಾರಿಕೆ, ಗಾಂಭೀರ್ಯ ಎಲ್ಲವೂ ನನಗೆ ಯಕ್ಷಗಾನದಲ್ಲಿಯೂ ಉಪಯೋಗವಾಗಿದೆ .






ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ತುಂಬಾ ಖುಷಿ ಆಗ್ತಾ ಇದೆ ಯಕ್ಷಗಾನ ಬಗ್ಗೆ  ಯುವತಿ ಯುವಕರಲ್ಲಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಾಗಿದೆ. ನಾವು ಎಳೆಯ ವಯಸ್ಸಿನವರಿಗಿದ್ದಾಗ ಯಕ್ಷಗಾನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಷ್ಟೇನೂ ಜ್ಞಾನ ಇರಲಿಲ್ಲ, ಈಗ ಹಾಗಿಲ್ಲ ಮಕ್ಕಳಿಗಿಂತ ಪೋಷಕರಿಗೆ ಯಕ್ಷಗಾನದಲ್ಲಿ ಒಲವು ಮೂಡಿದೆ. ಕಾಲದಲ್ಲಿ ಕೆಲವು ವರ್ಗಗಳಿಗೆ ಮಾತ್ರ ಸೀಮಿತವಿದ್ದು ಈಗ ಹಾಗಿಲ್ಲ. ಶಾಲಾ ಕಾಲೇಜಿನಲ್ಲಿ ಯಕ್ಷಗಾನ ಒಂದು ಐಚ್ಛಿಕ ವಿಷಯವಾಗಿ ಕಲಿಯಬಹುದು. ಎಲ್ಲ ಕಡೆಯೂ ತಪ್ಪು ಆಗುತ್ತದೆ ಹಾಗಾಗಿ ತಪ್ಪನ್ನು ಸರಿಪಡಿಸಿ ಮುಂದೆ ಸಾಗಬೇಕು.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ನಾಟಕ ನೃತ್ಯ ಕಾರ್ಯಕ್ರಮಗಳಿಗೆ  ಕಂಪೇರ್ ಮಾಡಿ ನೋಡಿದಾಗ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇದೆ ಎಂದು ಕಾಣುತ್ತದೆ. ಹಿರಿಯರು ಮಕ್ಕಳಿಗೆ ಯಕ್ಷಗಾನ ತೋರಿಸಿದರೆ ಮಾತ್ರ ಮುಂದೆ ಯಕ್ಷಗಾನ ಕಲಾವಿದರು ಹುಟ್ಟಲು ಸಾಧ್ಯ ಎಂದು ನನ್ನ ಅನಿಸಿಕೆ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಪ್ರಧಾನ ವೇಷಕ್ಕೆ ಜನ ಅಭಿಮಾನಿಗಳಾಗುತ್ತಾರೆ . ಮುಖ್ಯ ವೇಷ ಬಂದಾಗ ಸೇರುವುದು ಆಮೇಲೆ ಎದ್ದು ಹೋಗುವುದು ಕಂಡಾಗ ಬೇಸರ ಆಗುತ್ತದೆ. ಎಲ್ಲ ವೇಷಗಳೂ ಸಮಾನ ಎಲ್ಲದರಲ್ಲೂ ನೊಡುವುದು ಕಲಿಯುವುದು ತುಂಬಾ ಇದೆ. ಪ್ರೇಕ್ಷಕರು ಇದ್ದರೆ ಮಾತ್ರ ಕಲಾವಿದನಿಗೂ ಸ್ಪೂರ್ತಿ. ಯುವಕರು ಮಕ್ಕಳು ಯಕ್ಷಗಾನ ಕಲಿತರೆ ಮುಂದಿನ ಪೀಳಿಗೆಗೆ ಉಪಯೋಗವಾಗಬಹುದು .

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನ ವೇಷ ಮಾಡಲು ಅವಕಾಶ ದೊರೆತಾಗ ಖಂಡಿತವಾಗಿಯೂ ಮಿಸ್ ಮಾಡಲ್ಲ. ನಮ್ಮ ಯಕ್ಷಗಾನ ಮೇಡಂ ಅಂತೆ ನಾನು ಕೂಡ ಏನಾದರು ಹೆಸರು ಮಾಡಬೇಕು ಎಂದು ಮನಸ್ಸಿನಲ್ಲಿದೆ .



ಸನ್ಮಾನ ಹಾಗೂ ಪ್ರಶಸ್ತಿ:-
♦️ ರಾಜ್ಯಮಟ್ಟದ ಕನ್ನಡ ಪರೀಕ್ಷೆಯಲ್ಲಿ ರಾಜ್ಯಕ್ಕೆ ರಾಂಕ್ ಪಡೆದು "ಕನ್ನಡ ಕೀರ್ತಿಶ್ರೀ" ಸನ್ಮಾನ.
♦️ ತುಳು ಸಾಹಿತ್ಯ ಅಕಾಡೆಮಿಯಿಂದ ಬಹುಮುಖ ಪ್ರತಿಭೆ ಸನ್ಮಾನ.
ಶಿಕ್ಷಣ ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳು. ಹಲವು ಕಡೆಗಳಲ್ಲಿ ಚಿತ್ರಕಲೆ ರಂಗೋಲಿ  ನೃತ್ಯ ಹಾಗೂ ಯಕ್ಷಗಾನ ಸ್ಪರ್ಧೆಗಳಿಗೆ ತೀರ್ಪುಗಾರನಾಗಿ ಸೇವೆ.


ಯಕ್ಷಗಾನ, ಚಿತ್ರಕಲೆ, ಮುಖವರ್ಣಿಕೆ, ನಾಟಕ, ಕೊರಿಯೋಗ್ರಾಫಿ, ಕುಣಿತ ಭಜನೆ, ವಾಲ್ ಆರ್ಟ್ ಮತ್ತು ವ್ಲಾಗಿಂಗ್ ಇವರ ಹವ್ಯಾಸಗಳು.
ಕಲಾಕುಂಭ ಯಕ್ಷ ವೃಂದ ಮತ್ತು ಇತರ ಕಡೆ ಹವ್ಯಾಸಿ ಕಲಾವಿದನಾಗಿ ವೇಷ ಮಾಡಿದ ಅನುಭವ.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಅಕ್ಷಯ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395