ಯಕ್ಷ ಸಾಧಕರು 362
"ಯಕ್ಷ ಕಲಾನ್ವಿತೆ"
ಇವರು ಯಕ್ಷಗಾನ, ಭರತನಾಟ್ಯ, ಸಂಗೀತ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿರುವ ಯುವ ಕಲಾವಿದೆ. ಸಂಗೀತ ಜೂನಿಯರ್, ಭರತನಾಟ್ಯ ಸೀನಿಯರ್ ಪರೀಕ್ಷೆ ತೆರ್ಗೊಡೆಗೊಂಡಿರುವ ಕಲಾವಿದೆ. ಯಕ್ಷಗಾನ ರಂಗಕ್ಕೆ ಬರಲು ಮುಖ್ಯ ಪ್ರೇರಣೆ ಇವರ ತಂದೆ, ತಾಯಿ ಹಾಗೂ ಅಣ್ಣ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಎಂ.ಗೋವರ್ಧನ ಹಾಗೂ ವಿದುಷಿ ಶ್ರೀಮತಿ ಕಾಂತಿ ಜಿ ಭಟ್ ಇವರ ಮಗಳಾಗಿ 16.04.2009ರಂದು ಅಭಿಜ್ಞಾ ಎಸ್ ಎಂ ಅವರ ಜನನ. ಆಳ್ವಾಸ್ ಪದವಿಪೂರ್ವ ಕಾಲೇಜು ಮೂಡುಬಿದಿರೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ಇವರ ಯಕ್ಷಗಾನ ಗುರುಗಳು. ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ, ಪೆರ್ಲ ಕಾಸರಗೋಡು ಇವರು ಯಕ್ಷಗಾನ ಕಲಿತ ಕೇಂದ್ರ.
ತಾಯಿ ವಿದುಷಿ ಶ್ರೀಮತಿ ಕಾಂತಿ ಜಿ ಭಟ್ ಇವರ ಭರತನಾಟ್ಯ ಗುರುಗಳು.
ಶ್ರೀಮತಿ ಯಶಸ್ವಿನಿ ಉಳ್ಳಾಲ ಮತ್ತು ಪೂರ್ಣಿಮಾ ಗೋರೆ ಇವರ ಸಂಗೀತ ಗುರುಗಳು.
ನೆಚ್ಚಿನ ಪ್ರಸಂಗ ಹಾಗೂ ವೇಷ:-
ಅಶ್ವಮೇಧ, ಬಬ್ರುವಾಹನ.
ಸ್ತ್ರೀ ವೇಷ, ಪಗಡಿ ವೇಷ, ಕಿರೀಟ ವೇಷ, ಬಣ್ಣದ ವೇಷವನ್ನು ಸಬ್ಬಣಕೋಡಿಯವರ ನಿರ್ದೇಶನದಲ್ಲಿ ಮಾಡುತ್ತಿದ್ದೇನೆ. ಲಕ್ಷ್ಮೀ, ಮೀನಾಕ್ಷಿ, ರತಿ, ಕೃಷ್ಣ, ದೇವೇಂದ್ರ, ರಕ್ತಬೀಜ, ಬಬ್ರುವಾಹನ, ದೇವತೆ ಬಲ, ರಾಕ್ಷಸ ಬಲ, ರತಿ, ಜ್ವಾಲಾಮಾಲಿನಿ, ಸಖಿ ವೇಷ ಮಾಡಿರುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರು ಯಕ್ಷಗಾನ ಕಲೆಯ ಕಡೆಗೆ ಆಕರ್ಷಿತರಾಗಿ ತಮ್ಮನ್ನು ತಾವು ತೊಡಗಿಕೊಳ್ಳುವುದು ಖುಷಿಯ ವಿಚಾರ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರತೀಯೊಂದು ವಿಷಯದಲ್ಲೂ ನಾವೀನ್ಯತೆಯನ್ನು ಹುಡುಕುವ ಈ ಪೀಳಿಗೆ ಅಂತಹದರಲ್ಲಿ ನಮ್ಮ ಈ ಯಕ್ಷಗಾನ ಕಲೆಯ ಶಿಸ್ತಿನ ಚೌಕಟ್ಟನ್ನು ಗೌರವಿಸಿ, ನಾವೀನ್ಯತೆಯನ್ನು ಸ್ವೀಕರಿಸುವಂತಹ ಈ ಕಾಲದ ಪ್ರೇಕ್ಷಕರು.
ಸನ್ಮಾನ ಹಾಗೂ ಪ್ರಶಸ್ತಿಗಳು:-
ಪಟ್ಲ ಸಂಭ್ರಮದಲ್ಲಿ ಆಳ್ವಾಸ್ ಪ್ರೌಢ ಶಾಲಾ ತಂಡ ಪ್ರಥಮ ಸ್ಥಾನ ಪಡೆದಿದೆ, ಲಕ್ಷ್ಮೀ ಪಾತ್ರಕ್ಕೆ ದ್ವಿತೀಯ ಬಹುಮಾನ ಬಂದಿದೆ.
ಮೂಡುಬಿದಿರೆಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನವರು ನಡೆಸುತ್ತಿರುವ ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಮೂರು ವರ್ಷ ಸತತ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಆಳ್ವಾಸ್ ಧೀಂಕಿಟದಲ್ಲಿ ಕಳೆದ ಐದು ವರ್ಷಗಳಿಂದ ತಿರುಗಾಟದ ಅನುಭವ.
ಧರ್ಮಸ್ಥಳ ಮೇಳ, ಹನುಮಗಿರಿ ಮೇಳದಲ್ಲಿ ವೇಷ ಮಾಡಿದ ಅನುಭವ.
ಅನೇಕ ಹಿರಿಯರು ನಾಟ್ಯ ನೋಡಿ ತುಂಬಾ ಮೆಚ್ಚಿಕೊಂಡಿದ್ದಾರೆ. ಮಕ್ಕಳ ತಂಡದಲ್ಲಿ ವೇಷ ಮಾಡಲು ಅವಕಾಶ ಕೊಟ್ಟ ಗುರುಗಳು ಶ್ರೀ ದೇವಾನಂದ ಭಟ್ ಬೆಳುವಾಯಿ ಮತ್ತು ಶ್ರೀ ಮಹಾವೀರ ಪಾಂಡಿ ಕಾಂತಾವರ, ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಅವರಿಗೆ ಯಾವತ್ತೂ ಚಿರಋಣಿ ಎಂದು ಹೇಳುತ್ತಾರೆ ಅಭಿಜ್ಞಾ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಅಭಿಜ್ಞಾ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment