ಯಕ್ಷ ಸಾಧಕರು 363
"ಯಕ್ಷ ಕಲಾ ಕ್ರಿಯಾಶೀಲ"
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಸೂರಿಂಜೆಯ ಶ್ರೀಮತಿ ವೇದಾವತಿ ಹಾಗೂ ಶ್ರೀಧರ್ ಕೋಟ್ಯಾನ್ ಇವರ ಮಗನಾಗಿ 12-02-2003ರಂದು ಕಾರ್ತಿಕ್ ಸೂರಿಂಜೆ ಅವರ ಜನನ. ಎಂ.ಎಸ್ಸಿ In General Chemistry ಇವರ ವಿದ್ಯಾಭ್ಯಾಸ.
ಪ್ರಾಥಮಿಕ ಹೆಜ್ಜೆ ಕಲಿಸಿದವರು ಜೀತು ಕುಲಾಲ್ ಸೂರಿಂಜೆ ಅವರ ಬಳಿ ಕಲಿತು. ನಂತರದಲ್ಲಿ ರಾಮಚಂದ್ರ ಮುಕ್ಕ ಅವರ ಬಳಿ ನಾಟ್ಯ ಅಭ್ಯಾಸ ಕಲಿತು, ಬಿಎಸ್ಸಿ ಹಾಗೂ ಎಂಎಸ್ಸಿಯಲ್ಲಿ ಅಂತರ್ ಕಾಲೇಜು ಸ್ಪರ್ಧೆಗಳಿಗೆ ಶ್ರೀಮತಿ ಪೂರ್ಣಿಮಾ ಯತೀಶ್ ರೈಯವರ ನಿರ್ದೇಶನದಲ್ಲಿ ವೇಷ ಮಾಡಿದ ಅನುಭವ.
ಅಮ್ಮನ ಆಸೆಯಂತೆ 7 ನೇ ತರಗತಿಯಲ್ಲಿ ಇರುವಾಗ ಜೀತು ಕುಲಾಲ್ ಸೂರಿಂಜೆ ಅವರ ನೇತೃತ್ವದಲ್ಲಿ ಊರಿನಲ್ಲಿ ಶ್ರೀ ದೇವಿ ಯಕ್ಷ ವೃಂದ ಇದಕ್ಕೆ ಸೇರಿದೆ ಹಾಗಾಗಿ ಸೇರುವುದಕ್ಕೆ ಮುಖ್ಯವಾಗಿ ಅಮ್ಮನೇ ಪ್ರೇರಣೆ.
ನೆಚ್ಚಿನ ಪ್ರಸಂಗಗಳು:-
ದೇವಿಮಹಾತ್ಮೆ, ಮುರಾಸುರ ವಧೆ, ನರಕಾಸುರ ಮೋಕ್ಷ, ಭಸ್ಮಾಸುರ ಮೋಹಿನಿ ಇತ್ಯಾದಿ.
ನೆಚ್ಚಿನ ವೇಷಗಳು:-
ಮುರಾಸುರ, ರಕ್ತಬೀಜ, ದೇವೇಂದ್ರ, ಅರ್ಜುನ, ಭಸ್ಮಾಸುರ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲಾಗಿ ವೇಷ ಹಾಗೂ ಪ್ರಸಂಗದ ನಡೆ ತಿಳಿದುಕೊಂಡು ಗುರುಗಳಲ್ಲಿ, ಹಿರಿಯ ಕಲಾವಿದರಲ್ಲಿ, ಸಹಕಲಾವಿದರಲ್ಲಿ ಹಾಗೂ ಭಾಗವತದಲ್ಲಿ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಕಾರ್ತಿಕ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಪ್ರಸ್ತುತ ಕಾಲದಲ್ಲಿ ನನ್ನoತೆ ಅನೇಕ ಯುವ ಕಲಾವಿದರು ಈ ಕಲೆಯತ್ತ ಆಕರ್ಷಿತರಾಗುತ್ತಿದ್ದಾರೆ ಹಾಗಾಗಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಸದ್ಯ ಕಾಲಮಿತಿ ಪ್ರದರ್ಶನದಿಂದ ಪರಂಪರೆ ಹಾಗೂ ಪ್ರಸಂಗದ ಸತ್ವ ಕಮ್ಮಿಯಾದರೂ ಪ್ರೇಕ್ಷಕರ ಒಲವು ಹೆಚ್ಚಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಏನೇ ಆದರೂ ಈ ಕಲೆಗೆ ಪ್ರೇಕ್ಷಕರ ವರ್ಗ ಅಂತೂ ಅಪಾರ. ಇತ್ತೀಚೆಗೆ ಹೊರರಾಜ್ಯಗಳಲ್ಲೂ ಈ ಕಲೆಗೆ ಅಪಾರ ಮಂದಿ ಪ್ರೇಕ್ಷಕರಿರುವುದು ಸಂತೋಷ ಹಾಗೂ ಹೆಮ್ಮೆ .
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನೀಲವುಗಳೆನ್ನು:-
ಮೊದಲಾಗಿ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕಲಾವಿದನ ಕರ್ತವ್ಯ. ಹಿರಿಯರಿಂದ ಮುಂದುವರೆದ ಪರಂಪರೆಯನ್ನು ಇನ್ನೂ ಮುಂದಕ್ಕೂ ಮುನ್ನಡೆಸುವುದು. ಅಚ್ಚುಕಟ್ಟಾಗಿ ಯಾವುದೇ ಲೋಪದೋಷ ಬಾರದೆ ರಂಗದಲ್ಲಿ ಪಾತ್ರ ನಿರ್ವಹಿಸುವುದರಿಂದ ಕಲೆಯ ಆಹಾರ್ಯ ಉಳಿಯುತ್ತದೆ.
ಯಕ್ಷರಂಗದಲ್ಲಿ ಮುಂದಿನ ಯೋಜನೆ:-
ನನ್ನ ತಾಯಿಯ ಆಸೆಯಂತೆ ನಾನು ಉತ್ತಮ ಕಲಾವಿದನಾಗಬೇಕು ಹಾಗೂ ಮೇಳದಲ್ಲಿ ತಿರುಗಾಟವನ್ನು ಮಾಡಬೇಕು ಅನ್ನುವ ಆಲೋಚನೆ ಇದೆ. ಸದ್ಯಕ್ಕೆ ಫಾರ್ಮ ಉದ್ಯೋಗದಲ್ಲಿ ಇರುವುದರಿಂದ ಸ್ವಲ್ಪ ಕಷ್ಟ ಸಾಧ್ಯ. ಮುಂದೆ ಕಾಲ ಕೂಡಿಬಂದರೆ ಖಂಡಿತ ತಿರುಗಾಟ ಮಾಡುವ ಆಸೆ ಇದೆ.
ಕಾಲೇಜು ರಜೆ ದಿನಗಳಲ್ಲಿ ಊರಿನಲ್ಲಿ ನಡೆಯುತ್ತಿದ್ದ ಕಟೀಲು , ಬೆಂಕಿನಾಥೇಶ್ವರ, ಬಪ್ಪನಾಡು ಮೇಳಗಳಲ್ಲಿ ವೇಷ ಮಾಡುತ್ತಿದ್ದೆ. ಕಳೆದ 5 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಸುರತ್ಕಲ್ ಮಹಮ್ಮಾಹಿ ಯಕ್ಷಗಾನ ಮೇಳದಲ್ಲಿ ವೇಷ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ ಕಾರ್ತಿಕ್.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಉತ್ತಮ ಯಕ್ಷಗಾನ ವಿದ್ಯಾರ್ಥಿ ಕಲಾವಿದ 2020 ಗೋವಿಂದ ದಾಸ ಕಾಲೇಜು ಸುರತ್ಕಲ್.
♦️ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೃಷ್ಣಾಪುರದಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಸುಧ ನ್ವಾರ್ಜುನ ಪ್ರಸಂಗದ ಅರ್ಜುನ ಪಾತ್ರಕ್ಕೆ ರಾಜವೇಷ ವಿಭಾಗದಲ್ಲಿ ವೈಯಕ್ತಿಕ ದ್ವಿತೀಯ ಬಹುಮಾನ.
♦️ ಶ್ರೀ ದುರ್ಗಾಪರಮೇಶ್ಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು ಆಯೋಜಿಸಿದ ಭ್ರಾಮರೀ ಯಕ್ಷ ಜೇoಕಾರ 2023 ಮುರಾಸುರ ಪಾತ್ರಕ್ಕೆ ರಾಜವೇಷ ವಿಭಾಗದಲ್ಲಿ ವೈಯಕ್ತಿಕ ಪ್ರಥಮ ಬಹುಮಾನ.
♦️ ಎಸ್.ಡಿ.ಮ್ ಕಾನೂನು ಮಹಾವಿಧ್ಯಾಲಯ ಯಾಕ್ಸೋತ್ಸವ 2022 ರಲ್ಲಿ ರಾಜಾವೇಷ ಮುರಾಸುರ ಪಾತ್ರಕ್ಕೆ ವೈಯಕ್ತಿಕ ಪ್ರಥಮ.
♦️ ಏ. ಜೆ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್ಮೆಂಟ್ ಯಕ್ಷಕಲೋತ್ಸವ 2022 ಅತ್ಯುತ್ತಮ ರಾಜವೇಷ.
ಯಕ್ಷಗಾನ, ಬಣ್ಣಗಾರಿಕೆ, ಕ್ರಿಕೆಟ್ ಆಡುವುದು , ಚಿತ್ರ ಬಿಡಿಸುವುದು ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಕಾರ್ತಿಕ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment