ಯಕ್ಷ ಸಾಧಕರು 368

"ಯಕ್ಷ ಕಲಾಕನ್ಯೆ"

ಇವರ ಹುಟ್ಟೂರು ಭ್ರಮರಾಂಬಿಕೆ ನೆಲೆಸಿರುವ ಹಾಗೂ ನಂದಿನಿ ನದಿ ಹರಿಯುವ ಪುಣ್ಯದ ಭೂಮಿ ಕಟೀಲು. ತಂದೆ ತಾಯಿಯ ಪ್ರೇರಣೆ ಹಾಗೂ ತಾಯಿಯ ಆಸೆಯಂತೆ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದವರು ಮೇಘಾ ಕಟೀಲ್.

27.01.2005ರಂದು ಹೇಮಲತಾ ಹಾಗೂ ಪುಷ್ಪರಾಜ್ ಕಟೀಲ್ ಇವರ ಮಗಳಾಗಿ ಜನನ. BCA ಇವರ ವಿದ್ಯಾಭ್ಯಾಸ. ಶ್ರೀ ರಾಜೇಶ್ ಐ ಕಟೀಲ್ ಹಾಗೂ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರ ಯಕ್ಷಗಾನ ಗುರುಗಳು.




ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ಸುಧನ್ವಾರ್ಜುನ ಕಾಳಗ, ಕಂಸವಧೆ, ಜಾಂಬವತಿ ಕಲ್ಯಾಣ, ನರಕಾಸುರ ಮೋಕ್ಷ, ಕೃಷ್ಣಾರ್ಜುನ ಕಾಳಗ, ಶಶಿಪ್ರಭ ಪರಿಣಯ.
ನೆಚ್ಚಿನ ವೇಷಗಳು:- ಶ್ರೀ ದೇವಿ, ಕಂಸ, ಸುಧನ್ವ, ಅರ್ಜುನ, ಶಶಿಪ್ರಭೆ, ಜಾಂಬವಂತ, ಶ್ರೀ ರಾಮ, ಕೃಷ್ಣ, ಸುದರ್ಶನ, ವಿಷ್ಣು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪಾತ್ರದ ಬಗ್ಗೆ ಸರಿಯಾಗಿ ಗಮನಹರಿಸಿ ಸನ್ನಿವೇಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ವೇಷ ಹಾಗೂ ಪ್ರಸಂಗದ ನಡೆ ತಿಳಿದುಕೊಂಡು ಗುರುಗಳಲ್ಲಿ, ಭಾಗವತರಲ್ಲಿ  ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರು ಯಕ್ಷಗಾನ ಕಲೆಯ ಕಡೆಗೆ ಆಕರ್ಷಿತರಾಗಿ ತಮ್ಮನ್ನು ತಾವು ತೊಡಗಿಕೊಳ್ಳುವುದು ಖುಷಿಯ ವಿಚಾರ. ಹೊರದೇಶಗಳಲ್ಲಿಯು ಜನರು ಯಕ್ಷಗಾನದ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಕೇಳಿದಾಗ ಹೆಮ್ಮೆಯೆನಿಸುತ್ತಿದೆ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು?:-
ಯಕ್ಷಗಾನದ ಹಿಂದಿನ ಪರಂಪರೆ ಉಳಿಯಬೇಕು. ಪರಿಪೂರ್ಣ ಯಕ್ಷಗಾನ ನಾಟ್ಯ ಗುರುಗಳಿಂದ ತರಬೇತಿ ಪಡೆದು ಯಕ್ಷರಂಗವನ್ನು ಪ್ರವೇಶಿಸಬೇಕು. ಯಕ್ಷಗಾನದ ಕಂಪು ಇನ್ನಷ್ಟು ಹರಡಲಿ ಎನ್ನುವುದು ನನ್ನ ಆಸೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಒಂಬತ್ತನೇ ವಯಸ್ಸಿನಲ್ಲಿ ಯಕ್ಷಗಾನ ಕಲಿಕೆಯನ್ನು ಪ್ರಾರಂಭಿಸಿ ಮುಂದುವರೆಸಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೂ ಕೂಡ ನನ್ನಿಂದ ಸಾಧ್ಯವಾದಷ್ಟು ನನ್ನನ್ನು ಗುರುತಿಸಿಕೊಂಡಂತಹ ಈ ಕಲೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಇಚ್ಚಿಸುತ್ತೇನೆ.






ಸನ್ಮಾನ ಹಾಗೂ ಪ್ರಶಸ್ತಿ:-
♦️ 2017 ರಲ್ಲಿ ಜಿಲ್ಲಾಮಟ್ಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಸುದರ್ಶನ ಪಾತ್ರಕ್ಕೆ ಪ್ರಥಮ ಸ್ಥಾನ.
♦️ 2018 ರಲ್ಲಿ ಜಿಲ್ಲಾಮಟ್ಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಸುದರ್ಶನ ಪಾತ್ರಕ್ಕೆ ಪ್ರಥಮ ಸ್ಥಾನ.
♦️ 2020 ರಲ್ಲಿ ಜಿಲ್ಲಾಮಟ್ಟದಲ್ಲಿ ವೈಯುಕ್ತಿಕ ವಿಭಾಗದಲ್ಲಿ ಸುದರ್ಶನ ಪಾತ್ರಕ್ಕೆ ದ್ವಿತೀಯ  ಸ್ಥಾನ.
♦️ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೃಷ್ಣಾಪುರದಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಸುಧನ್ವಾರ್ಜುನ ಪ್ರಸಂಗದ  ಸುಧನ್ವ ಪಾತ್ರಕ್ಕೆ ಪುಂಡುವೇಷದ ವಿಭಾಗದಲ್ಲಿ ವೈಯಕ್ತಿಕ ದ್ವಿತೀಯ ಬಹುಮಾನ.
♦️ ಕೃಷ್ಣವೇಷ ಸ್ಪರ್ಧೆಯಲ್ಲಿ ಮತ್ತೆ ಚಿತ್ರಕಲೆಯಲ್ಲಿಯೂ ಬಹುಮಾನಗಳು ಸಿಕ್ಕಿವೆ.

ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.



ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395