ಯಕ್ಷ ಸಾಧಕರು 370

"ಯಕ್ಷದೀಕ್ಷಾ"

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮದ ಮಾಧವ ಎಸ್ ಶೆಟ್ಟಿ ಹಾಗೂ ಮೀರವಾಣಿ ಎಂ ಶೆಟ್ಟಿ ಇವರ ಮಗಳಾಗಿ 17.09.1996ರಂದು ದೀಕ್ಷಾ ಎಂ ಶೆಟ್ಟಿ ಅವರ ಜನನ.
ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ & ರಿಸರ್ಚ್ ಕಾಲೇಜ್ ನಲ್ಲಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಎಂ.ಬಿ.ಎ ಪದವಿ, ಡಿಪಾರ್ಟ್ಮೆಂಟ್ ಆಫ್ ಹೆಲ್ತ್
ಸಿಸ್ಟಂ ಮ್ಯಾನೇಜ್ಮೆಂಟ್ ಸ್ಟಡೀಸ್ ಪದವಿ ಪಡೆದು ಪ್ರಸ್ತುತ  ಸೆಂಟರ್ ಫಾರ್ ಡಿಸ್ಟೆನ್ಸ್ ಅಂಡ್ ಆನ್ಲೈನ್ ಎಜುಕೇಶನ್ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಮೈಸೂರು ಇಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಲ್ಲಿ ಇದ್ದಾರೆ. ಅದರೊಂದಿಗೆ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಸಿಸ್ಟಂ ಮ್ಯಾನೇಜ್ಮೆಂಟ್ ಸ್ಟಡೀಸ್, ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ & ರಿಸರ್ಚ್ ಇಲ್ಲಿ PhD ವ್ಯಾಸಂಗ ಮಾಡುತ್ತಿದ್ದಾರೆ.





ರಮೇಶ್ ಶೆಟ್ಟಿ ಬಾಯಾರು ಹಾಗೂ ಪೂರ್ಣಿಮಾ ಯತೀಶ್ ರೈ ಇವರ ಯಕ್ಷಗಾನ ಗುರುಗಳು.
ಅಪ್ಪ  ಮಾಧವ ಎಸ್ ಶೆಟ್ಟಿ, ಅಮ್ಮ ಮೀರಾವಾಣಿ ಎಂ ಶೆಟ್ಟಿ, ಅಜ್ಜ ಅಜ್ಜಿ ಹಾಗೂ ಅತ್ತೆ ಪೂರ್ಣಿಮಾ ಯತೀಶ್ ರೈ ಅವರ ಪ್ರೇರಣೆಯಿಂದ ಯಕ್ಷಗಾನ ಕ್ಷೇತ್ರಕ್ಕೆ ಬಂದವರು ದೀಕ್ಷಾ ಎo ಶೆಟ್ಟಿ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ, ಜಾಂಬವತಿ ಕಲ್ಯಾಣ, ಶ್ರೀ ದೇವಿ ಬನಶಂಕರಿ, ಶ್ರೀ ಕೃಷ್ಣ ಲೀಲೆ, ಇಂದ್ರಜಿತು ಕಾಳಗ, ಅಗ್ರಪೂಜೆ, ಶ್ರೀನಿವಾಸ ಕಲ್ಯಾಣ, ಮಾನಿಷಾದ, ಮೈಂದ ದ್ವಿವಿದ.
ನೆಚ್ಚಿನ ವೇಷಗಳು:-
ರಾಮ, ಶುಂಭ ನಿಶುಂಭ, ವರಾಹ, ಶ್ರೀ ದೇವಿ, ರಾವಣ, ವರಾಹ, ಸಿಂಹ, ಶಂಖಾಸುರ, ದುರ್ಗಾಸುರ, ಕಾಳಿಂಗ, ಹಿರಣ್ಯಾಕ್ಷ, ಶತ್ರುಪ್ರಸೂದನ ಅಲ್ಲದೆ ಇನ್ನೂ ಇತರ ಅನೇಕ ವೇಷ ಮಾಡಿದ ಅನುಭವ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳು ಹಾಗೂ ನನ್ನ ತಂದೆ ಮತ್ತು ಸಹ ಕಲಾವಿದರೊಂದಿಗೆ  ಚರ್ಚಿಸುತ್ತೇನೆ. ಅನೇಕ ಸಲ ಪುಸ್ತಕ ಓದಿ ಪ್ರಸಂಗಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಮೇಳದ ಯಕ್ಷಗಾನವನ್ನು ಯೂಟ್ಯೂಬ್ ನೋಡಿ ಅವರು ಹೇಗೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡು ತಯಾರಿ ಮಾಡಿಕೊಳ್ಳುತ್ತೇನೆ.





ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ಸ್ಥಿತಿ ತುಂಬಾ ಉತ್ತಮವಾಗಿದೆ. ವೀಕ್ಷಕರು ಹೆಚ್ಚಾಗಿದ್ದಾರೆ. ಕಲಾವಿದರಿಗೂ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ಅಭಿಮಾನಿ ಬಳಗ ಹೆಚ್ಚಾಗಿದೆ. ಪಟ್ಲ ಫೌಂಡೇಶನ್ನಂತಹ ಕಾರ್ಯಕ್ರಮಗಳಿಂದ ಕಲಾವಿದರಗೆ ಅನೇಕ ಇನ್ಶೂರೆನ್ಸ್  ಸವಲತ್ತುಗಳು ಸಿಕ್ಕಿದೆ. ಕೆಲವರು ಸವಲತ್ತುಗಳ ದುರುಪಯೋಗ ಮಾಡಿದವರು ಇದ್ದಾರೆ. ತರಬೇತಿ ಕೇಂದ್ರಗಳು ಹೆಚ್ಚಾಗಿದೆ. ಎಳವೆಯಲ್ಲೇ ಕಲಿಯುವ ಅವಕಾಶವಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕ ವೃಂದ ಹೆಚ್ಚಾಗಿದೆ. ಆದರೆ ಪ್ರಸಂಗದ ಬಗ್ಗೆ ತಿಳಿದುಕೊಳ್ಳೋದಕ್ಕಿಂತ ಕುಣಿತದ ಬಗ್ಗೆ ಮಾತ್ರ ಅಭಿಮಾನ ಹೆಚ್ಚಾಗಿದೆ. ಭಾಗವತಿಕೆ ಚೆಂಡೆ ಮದ್ದಳೆಗಳಲ್ಲಿ ಈಗ ಸಣ್ಣ ಪ್ರಾಯದ ಮಕ್ಕಳು ಭಾಗವಹಿಸುತ್ತಿದ್ದಾರೆ. ಯುವ ಪೀಳಿಗೆಗೆ ಯಕ್ಷಗಾನದ ಒಲವು ಹೆಚ್ಚಾಗಿದೆ. ಇದರಿಂದ ಒಂದೊಂದು ಸಲ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾದದ್ದು ಇದೆ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು?:-
ಯಕ್ಷಗಾನವನ್ನು ಸರಿಯಾಗಿ ಕಲಿತು ರಂಗಪ್ರವೇಶ ಮಾಡಬೇಕು. ಯಾರದ್ದೋ ಒತ್ತಾಯಕ್ಕೆ ಮಾಡಬಾರದು, ಸ್ವಂತಿಕೆ ಬೇಕು. ವಿದ್ಯಾರ್ಥಿಗಳಿಗೆ ಕಲಿಯುವ ಹಂಬಲ ಹೆಚ್ಚಾಗುವ ಹಾಗೆ ಮಾಡಬೇಕು. ಪುರಾಣದ ವಿಷಯದ ಬಗ್ಗೆ ಚರ್ಚಿಸುವ ತಿಳಿದುಕೊಳ್ಳುವ ಹಂಬಲ ಹೆಚ್ಚಾಗಬೇಕು.








ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನದ ಬಗ್ಗೆ ಇನ್ನಷ್ಟು ಕಲಿಯಬೇಕು, ಅಧ್ಯಯನ ಮಾಡಬೇಕು, ಯಕ್ಷಗಾನ ತರಬೇತಿ ಕ್ಲಾಸನ್ನು ಮೈಸೂರಿಗೆ ಪಸರಿಸಬೇಕು. ಯಕ್ಷಗಾನದ ಕಂಪು ಸದಾ ಇರಬೇಕು. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ಹಾಗೆ ಯಕ್ಷಗಾನವನ್ನು ಉಳಿಸಿ ಬೆಳಸಬೇಕೆನ್ನುವುದೇ ನನ್ನ ಆಸೆ.

ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ👇,


♦️ ಕರ್ನಾಟಕ ರಾಜ್ಯ ಯುವ ರತ್ನ ಪ್ರಶಸ್ತಿ.
♦️ಭಾರತದ ರಾಯಭಾರಿಯಾಗಿ ಚೀನಾ ದೇಶಕ್ಕೆ ಪ್ರವಾಸ 👇


♦️ ಸೌತ್ ಏಷ್ಯನ್ ಯೂನಿವರ್ಸಿಟಿಯ ಯೂತ್ ಫೆಸ್ಟಿವಲ್ ನಲ್ಲಿ ಭಾರತದ ಪ್ರತಿನಿಧಿಯಾಗಿ  ಭಾಗಿ.
♦️ ರಾಷ್ಟ್ರೀಯ ಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ನೃತ್ಯ, ನಾಟಕ, ಕ್ರೀಡೆ, ಮ್ಯೂಸಿಕ್, ಆರ್ಟ್ಸ್ ಇವರ ಹವ್ಯಾಸಗಳು.



ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395