ಯಕ್ಷ ಸಾಧಕರು 372
"ಯಕ್ಷ ಕಲಾಚತುರ"
ಚಿಕ್ಕ ವಯಸ್ಸಿನಿಂದ ಯಕ್ಷಗಾನ ನೋಡುತ್ತಾ ಬೆಳೆದ ಇವರು ನಾನೂ ಒಬ್ಬ ಕಲಾವಿದನಾಗಬೇಕು ಎಂಬ ಆಸೆ ಪಡುತ್ತಿದ್ದ ಸಂದರ್ಭದಲ್ಲಿ ಸಿದ್ದಾಪುರದಲ್ಲಿ ಡಾ.ಜಗದೀಶ್ ಶೆಟ್ಟಿ ಅವರ "ಯಕ್ಷ ನುಡಿಸಿರಿ" ವತಿಯಿಂದ ಯಕ್ಷಗಾನ ತರಗತಿ ಪ್ರಾರಂಭಗೊಳ್ಳುತ್ತದೆ. ಅಲ್ಲಿ ಐರೋಡಿ ಮಂಜುನಾಥ ಕುಲಾಲ್ ಅವರ ನಿರ್ದೇಶನದಲ್ಲಿ ಯಕ್ಷಗಾನ ತರಬೇತಿ ಪಡೆದು ಕಮಲಶಿಲೆ ಮೇಳದಲ್ಲಿ ಕಲಾ ಸೇವೆ ಮಾಡುತ್ತಿರುವ ಕಲಾವಿದ ವಿಘ್ನೇಶ್ ಪೈ ಸಿದ್ದಾಪುರ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಿದ್ದಾಪುರದ ಜಾನಕಿ ಹಾಗೂ ಶ್ರೀಕಾಂತ್ ಪೈ ದಂಪತಿಯರ ಮಗನಾಗಿ 17.06.2001ರಂದು ವಿಘ್ನೇಶ್ ಪೈ ಅವರ ಜನನ. BA ಇವರ ವಿದ್ಯಾಭ್ಯಾಸ.
ಯಕ್ಷಗಾನ ಕಲಾವಿದರ ಸೃಷ್ಟಿಕರ್ತರಾದ ಕೃಷ್ಣಮೂರ್ತಿ ಭಟ್ ಅವರ ಪ್ರೇರಣೆಯಿಂದ ದಕ್ಷ ಯಜಮಾನರಾದ ನಾರಾಯಣ ಶೆಟ್ಟಿ ಅವರ ಕಮಲಶಿಲೆ ಮೇಳಕ್ಕೆ ಅಪರೂಪಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಂತರದಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಯಕ್ಷಗಾನ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಅಭಿಮನ್ಯು, ಬಬ್ರುವಾಹನ, ಸತ್ಯ ಹರಿಶ್ಚಂದ್ರ, ಕರ್ಣಪರ್ವ, ತಾಮ್ರಧ್ವಜ, ರುದ್ರಕೋಪ, ಮಾರುತಿ ಪ್ರತಾಪ, ಭೂ ಕೈಲಾಸ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ನಾರದ, ಲಕ್ಷ್ಮಣ, ವೃಷಸೇನ, ಬಬ್ರುವಾಹನ, ಅಭಿಮನ್ಯು, ಕೃಷ್ಣ ಇತ್ಯಾದಿ ಇವರ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಅನುಭವಿ ಕಲಾವಿದರ ಹತ್ತಿರ ಹೋಗಿ ಪ್ರಸಂಗದ ಬಗ್ಗೆ ಕೇಳಿ ಪ್ರಸಂಗದಲ್ಲಿ ಏನು ಮಾಡಬೇಕು ಎಂದು ಕಲಿತುಕೊಂಡು, ಪದ್ಯಗಳನ್ನೆಲ್ಲ ಅಭ್ಯಾಸ ಮಾಡಿಕೊಳ್ಳುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆ ಪ್ರಸಂಗದ ಬಗ್ಗೆ ದೊರೆಯುವ ಮಾಹಿತಿಯನ್ನು ಪಡೆದು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ವಿಘ್ನೇಶ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದಲ್ಲಿ ಈಗ ಎಲ್ಲವೂ ಹೊಸತನ ಬಂದು ರಂಗದಲ್ಲಿ ಯಕ್ಷಗಾನವೋ, ಸಿನಿಮಾವೋ ಎಂದು ಗೊತ್ತಾಗುವುದೇ ಕಷ್ಟ. ಪೌರಾಣಿಕ ಪ್ರಸಂಗ ನೋಡುವಾಗ ಮನಸ್ಸಿಗೆ ತುಂಬಾ ಆನಂದವಾಗುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಕೆಲವು ಪ್ರೇಕ್ಷಕರಿಗೆ ಯಕ್ಷಗಾನ ಏನು ಎಂದು ಗೊತ್ತಿಲ್ಲ. ಕಲಾವಿದರು ಬಂದು ಎರಡರಿಂದ ಮೂರು ಚಲನಚಿತ್ರ ಡೈಲಾಗ್ ಹೇಳಿದ್ರೆ ಓ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಕೆಲವು ಪ್ರಜ್ಞಾವಂತ ಪ್ರೇಕ್ಷಕರು ಅದನ್ನು ತಪ್ಪು ಎಂದು ನಿರಾಕರಿಸುತ್ತಾರೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಸಂಪ್ರದಾಯ ವೇಷ ಅಂದ್ರೆ ತುಂಬಾ ಇಷ್ಟ. ರಂಗದಲ್ಲಿ ಬರುವ ತುಂಬಾ ದೊಡ್ಡ ಹಾಗೂ ಕಷ್ಟದ ವೇಷಗಳನ್ನು ಮಾಡಬೇಕು ಎಂಬ ಆಸೆ ಇದೆ.
ಸಂಪ್ರದಾಯ ವೇಷಗಳು ಈಗ ಕಾಣಸಿಗುವುದೇ ಕಷ್ಟ. ಅದರಲ್ಲಿಯೂ ಬಡಗುತಿಟ್ಟಿನ ಬಣ್ಣದ ತಟ್ಟಿ ವೇಷ ಕಾಣಲು ಸಿಗುವುದೇ ಇಲ್ಲ. ಸಾಂಪ್ರದಾಯಿಕ ಬಣ್ಣದ ತಟ್ಟಿ ವೇಷಕ್ಕೆ ತೆಂಕಿನ ವೇಷ ಭೂಷಣಗಳನ್ನು ಬಳಕೆ ಮಾಡುತ್ತಾ ಇದ್ದಾರೆ. ಈ ನಶಿಸಿ ಹೋಗುತ್ತಿರುವ ಬಡಗಿನ ಸಾಂಪ್ರದಾಯಿಕ ಬಣ್ಣದ ತಟ್ಟಿ ವೇಷವನ್ನು ಮತ್ತೆ ರಂಗಕ್ಕೆ ತರಬೇಕು ಎನ್ನುವ ಆಸೆ ಇದೆ.
ನಾನು ಸತ್ತರು ಯಕ್ಷಗಾನ ರಂಗದಲ್ಲಿ ನನ್ನ ಹೆಸರು ಉಳಿಯುವ ಹಾಗೆ ಹೆಸರು ಮಾಡಬೇಕು ಇದಕ್ಕೆ ಪ್ರಯತ್ನ ಪಡುತ್ತೇನೆ ಎಂದು ಹೇಳುತ್ತಾರೆ ವಿಘ್ನೇಶ್.
ಮೇಳದ ಈ ವರ್ಷದ ಸೇವೆಯಾಟದ ದಿನ ನಮ್ಮ ಮೇಳದ ಯಜಮಾನರಾದ ಶ್ರೀಯುತ ಸಚ್ಚಿದಾನಂದ ಚಾತ್ರ ಅವರಿಂದ ಸನ್ಮಾನ.
ಯಕ್ಷ ಶಿಕ್ಷಣದ ಗುರುವಾದ ನನಗೆ ಸಿದ್ದಾಪುರ ಶಾಲೆಯಲ್ಲಿ ಹಾಗೂ ಮೂಕಾಂಬಿಕಾ ಶಾಲೆಯಲ್ಲಿ ಸನ್ಮಾನ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment