ಯಕ್ಷ ಸಾಧಕರು 373

"ಯಕ್ಷ ಕಲಾಸಿರಿ"

ಉಡುಪಿ ಜಿಲ್ಲೆಯ ಕಾರ್ಕಳದ ದಿ.ಸೀತ ಎಸ್ ಶೆಟ್ಟಿ ಹಾಗೂ ದಿ.ಕೆ. ಶಾಮ ಶೆಟ್ಟಿ ದಂಪತಿಯರ ಮಗಳಾಗಿ 02.03.1967ರಂದು ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಅವರ ಜನನ. ಬಿ.ಎಸ್ಸಿ, ಪಿ ಜಿ ಡಿ ಎನ್ ಡಿ, ಕನ್ನಡದಲ್ಲಿ ಎಂ.ಎ ಹಾಗೂ ಡಿಪ್ಲೊಮಾ ಇನ್ ಯೋಗ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತಕ್ಕೆ ಬರಲು ಪ್ರೇರಣೆ ಇವರ ತಂದೆಯವರಾದ ದಿ.ಕೆ. ಶಾಮ ಶೆಟ್ಟಿ.




ಯಕ್ಷಗಾನ ಗುರುಗಳು:-
ಶ್ರೀ ಮಹಾವೀರ ಪಾಂಡಿ ಕಾಂತಾವರ, ಶ್ರೀ ರಾಮ್ ಭಟ್ ಕಾರ್ಕಳ, ಶ್ರೀ ಹರೀಶ್ ಶೆಟ್ಟಿ ಸೂಡ, ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ.

ನೆಚ್ಚಿನ ಪ್ರಸಂಗಗಳು:-
ವಾಲಿ ಮೋಕ್ಷ, ರಾವಣ ವಧೆ,  ಶ್ರೀ ರಾಮ ದರ್ಶನ, ಶರಸೇತು ಬಂಧನ, ಭೀಷ್ಮ ವಿಜಯ, ಕೃಷ್ಣ ಸಂಧಾನ, ಕದಂಬ ಕೌಶಿಕೆ, ತುಳುನಾಡ ಬಲಿಯೇಂದ್ರ, ತುಳುನಾಡ ಸಿರಿ, ಅರ್ಜುನ ಸನ್ಯಾಸಿ, ವಾಮನ ಚರಿತೆ ಇತ್ಯಾದಿ.
ನೆಚ್ಚಿನ ವೇಷಗಳು:-
ದಕ್ಷಯಜ್ಞದಲ್ಲಿ ದಕ್ಷ, ಶ್ವೇತ ಕುಮಾರ ಚರಿತ್ರೆಯಲ್ಲಿ ಋತುಸ್ವಜ, ಕುಶ, ರುಕ್ಮಿಣಿ ಕಲ್ಯಾಣದಲ್ಲಿ ಶಿಶುಪಾಲ, ಅಭಿಮನ್ಯು ಕಾಳಗದಲ್ಲಿ ಬಣ್ಣದ ವೇಷ (ರಾಕ್ಷಸಿ).
ತೆಂಕು ಹಾಗೂ ಬಡಗು ಉಭಯ ತಿಟ್ಟಿನಲ್ಲಿ ವೇಷ ಮಾಡಿದ ಅನುಭವ ಇವರದು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಸಹ ಕಲಾವಿದರಲ್ಲಿ ಚರ್ಚಿಸಿ, ಅಭ್ಯಸಿಸಿ ಹಾಗೂ ಅದೇ ದಿನ ಬೆಳಿಗ್ಗೆ ನನ್ನ ದೇವರಕೋಣೆಯಲ್ಲಿ ದೇವರಿಗೆ ಸಂಪೂರ್ಣ ಹೇಳಿ ಸಮರ್ಪಣೆ ಮಾಡಿಯೇ ವೇದಿಕೆಗೆ ಹೋಗುವುದು.





ಯಕ್ಷಗಾನದ ಇಂದಿನ ಸ್ಥಿತಿಗತಿ:-
ಒಳ್ಳೆಯ ರೀತಿಯಲ್ಲಿ ಮುಂದುವರೆಯುತ್ತಿದೆ. ಅಲ್ಲಲ್ಲಿ ಯಕ್ಷಗಾನ ಕಲಿಕೆ, ವೇದಿಕೆ ಪ್ರದರ್ಶನ, ಮುಂದಿನ ಜನಾಂಗದಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಒಳ್ಳೆಯ ಕಾರ್ಯ ನಡೆಯುತ್ತಿದೆ. ಪ್ರೋತ್ಸಾಹ, ಉತ್ತೇಜನ ಇದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾಲಮಿತಿ ಯಕ್ಷಗಾನ ನೋಡುವ ತಾಳ್ಮೆ, ವ್ಯವಧಾನ, ಆಸಕ್ತಿ ಕಾಣುತ್ತಿದೆ. ಮೊದಲಿನಂತೆ ರಾತ್ರಿಯಿಡೀ ನಿದ್ದೆ ಬಿಟ್ಟು ನೋಡುವ, ಅನುಭವಿಸುವ, ಆನಂದಿಸುವ ಜನರು ಕಡಿಮೆ ಆಗಿದೆ.

"ಯಕ್ಷಗಾನಂ ಗೆಲ್ಗೆ" - ಒಂದು ಒಳ್ಳೆಯ ಕಲೆ. ಇದರಲ್ಲಿ ನಾಟ್ಯ, ಹಾವಭಾವ, ಮಾತುಗಾರಿಕೆ, ವೇಷಗಾರಿಕೆ, ಬಣ್ಣ ಎಲ್ಲವೂ ಮೋಡಿ ಮಾಡುವಂತಿದೆ. ಒಂದು ಸಂಪೂರ್ಣ ಕಲೆ ಈ ಯಕ್ಷಗಾನ. ಇದು ಬೆಳೆಯಬೇಕು, ಉಳಿಯಬೇಕು. ನನ್ನ ತುಂಬ ಮೆಚ್ಚಿನ ಕ್ಷೇತ್ರ ಯಕ್ಷಗಾನ, ತಾಳಮದ್ದಲೆ.
ತಂದೆ ದಿ.ಕೆ. ಶಾಮ ಶೆಟ್ಟಿ ಯಕ್ಷಗಾನ ರಂಗದ ಒಳ್ಳೆಯ ಅರ್ಥಧಾರಿ ಹಾಗೂ ವೇಷಧಾರಿ ತಮ್ಮ ಮನೆಯಲ್ಲಿ  20ವರ್ಷಗಳ ಕಾಲ ತಾಳಮದ್ದಲೆ ಆಡಿಸಿದ್ದಾರೆ. ಆದರೆ ತಂದೆಯವರು ಇರುವಾಗ ತಾಳಮದ್ದಲೆ ಕ್ಷೇತ್ರಕ್ಕೆ ಬರಲು ನನಗೆ ಆಗಲಿಲ್ಲ ಎಂಬ ಕೊರಗು ಇದೆ, ಆದರೆ ತಂದೆಯ ಆಶೀರ್ವಾದ ಹಾಗೂ ದೇವಿಯ ದಯೆಯಿಂದ 99 ತಾಳಮದ್ದಲೆ ಕಾರ್ಯಕ್ರಮ ನೀಡಿ, ಇದೀಗ 100 ನೇ ತಾಳಮದ್ದಲೆ ದೇವರ ಅನುಗ್ರಹದಿಂದ ಬುಕ್ ಆಗಿದೆ ಇದನ್ನು ತಮ್ಮ ತಂದೆಯವರ ಚೇತನ ನೋಡಿ ತುಂಬಾ ಖುಷಿ ಪಟ್ಟಿರಬಹುದು ಎಂದು ಹೇಳುತ್ತಾರೆ ಜ್ಯೋತಿ.






ಸನ್ಮಾನ, ಪ್ರಶಸ್ತಿಗಳು:-
ದೇವರ ಅನುಗ್ರಹದಿಂದ ಮುಂಬೈಯಲ್ಲಿ ಅತ್ಯುತ್ತಮ ಕಲಾವಿದೆ, ಸೂಡದಲ್ಲಿ ಸ್ಕಂದ ಪ್ರಶಸ್ತಿ ಹಾಗೂ ಸಂಘಟನಾ ಚತುರೆ ಹಾಗೂ 2025 ರ ಯಕ್ಷಧ್ರುವ ಪುರಸ್ಕಾರ ದೊರೆತಿರುತ್ತದೆ.




ಹವ್ಯಾಸಗಳು:-
ತಾಳಮದ್ದಲೆ, ಯಕ್ಷಗಾನ, ಯೋಗ, ಧ್ಯಾನ, ಭಜನೆ, ಅಡುಗೆ, ಗಾರ್ಡನಿಂಗ್.

ಜ್ಯೋತಿ ಅವರು 24.4.1992 ರಂದು ಶ್ರೀ ಸುನಿಲ್ ಕುಮಾರ್ ಶೆಟ್ಟಿ (ವಕೀಲರು) ಅವರನ್ನು ಮದುವೆಯಾಗಿ ಮಕ್ಕಳಾದ ಸಂಜ್ಯೋತ್, ಶಾಶ್ವತಿ (ಇಂಜಿನಿಯರ್ಸ್)
ಅಳಿಯ ಅನೂಪ್ ರೈ (ಇಂಜಿನಿಯರ್), ಸೊಸೆ ಮೇಘನಾ ಶೆಟ್ಟಿ (ಸಿ.ಎ) ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಪತಿ, ಮಕ್ಕಳ, ಅಕ್ಕ, ಅಣ್ಣ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ.






ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395