ಯಕ್ಷ ಸಾಧಕರು 374

"ಯಕ್ಷೋತ್ಸಾಹಿ"

ಬಾಲ್ಯದಲ್ಲಿ ಊರಿನ ಸುತ್ತ ಮುತ್ತಲು ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳು, ಯಕ್ಷಗಾನ ವೇಷಭೂಷಣಗಳನ್ನು ನೋಡಿ ಪ್ರೇರಣೆಗೊಂಡು ಕಳೆದ 14 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದ ಗಿರೀಶ್ ನಾಯ್ಕ.



ಉಡುಪಿ ಜಿಲ್ಲೆಯ ಅಮಾಸೆಬೈಲು ಜಡ್ಡಿನಗದ್ದೆ ನೂಜಿಯ ಶ್ರೀಮತಿ ಸುಜಾತಾ ಹಾಗೂ ಶ್ರೀಯುತ ಪುಟ್ಟಯ್ಯ(ರಾಮ) ಇವರ ಮಗನಾಗಿ 03.03.1995ರಂದು ಜನನ.
ಯಕ್ಷಗಾನ ಗುರುಗಳು:-
ಶ್ರೀ ಕೆ. ಪಿ. ಹೆಗ್ಡೆ,
ಶ್ರೀ ರಮೇಶ್ ಗಾಣಿಗ  ಹಾರಾಡಿ,
ಶ್ರೀ ಕೃಷ್ಣಯ್ಯ ಆಚಾರ್ಯ, ಬಿದ್ಕಲ್ಕಟ್ಟೆ.

ನೆಚ್ಚಿನ ಪ್ರಸಂಗಗಳು:-
ಗಿರಿಜಾ ಕಲ್ಯಾಣ, ಶ್ರೀ ದೇವಿಮಹಾತ್ಮೇ, ವಿದ್ಯುನ್ಮತಿ ಕಲ್ಯಾಣ, ಇಂದ್ರಜಿತು, ಲವಕುಶ, ಜಾಂಬವತಿ ಕಲ್ಯಾಣ, ಅಭಿಮನ್ಯು ಕಾಳಗ ಇತ್ಯಾದಿ.
ನೆಚ್ಚಿನ ವೇಷಗಳು:-
ಪುರುಷ ವೇಷ:- ವಿದ್ಯುನ್ಮಾಲಿ, ಲವ, ಕುಶ, ದುಶ್ಯಾಸನ, ಕೌಂಡ್ಲಿಕ, ಲಕ್ಷ್ಮಣ, ಕೃಷ್ಣ, ವೃಷಸೇನಾ, ಭೀಮ, ರಾವಣ, ಮನ್ಮಥ, ಮೈಂದ, ದ್ವಿವಿದ.
ಸ್ತ್ರೀ ವೇಷಗಳು:- ರತಿ, ದಿತಿ, ಮಾಲಿನಿ, ಮೋಹಿನಿ, ಬನಶಂಕರಿ, ಕೊಲ್ಲಾಂಬಿಕೆ, ಚಂಪಕಮಾಲಿನಿ, ರುಕ್ಮಿಣಿ, ಸತ್ಯಭಾಮೆ, ಅಂಬೆ, ದಾಕ್ಷಾಯಣಿ.




ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಭಾಗವತರಲ್ಲಿ ಕೇಳಿ ತಿಳಿಯುವುದು. ಆಮೇಲೆ ಹಿರಿಯ ಕಲಾವಿದರಲ್ಲಿ ಚರ್ಚಿಸಿಕೊಂಡು ಎದುರಿಗೆ ಬರುವ
ಕಲಾವಿದರಲ್ಲಿ ಪಾತ್ರದ ಬಗ್ಗೆ ಮಾತಾಡಿಕೊಂಡು ರಂಗಕ್ಕೆ ಹೋಗುವ ಮೊದಲು ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಕಾಲಕ್ಕೆ ತಕ್ಕಂತೆ ಬದಲಾದ ಹಾಗೆ ಕಾಲಮಿತಿ ಪ್ರದರ್ಶನ ಇದರಿಂದ ನಮ್ಮಂಥಹ ಬೆಳೆಯುವ ಕಲಾವಿದರಿಗೆ ಸ್ವಲ್ಪ ಕಲಿಯಲು ಅನಾನುಕೂಲ. ಆದರೆ ಎಲ್ಲರೂ ಕಾಲಮಿತಿಯ ಮೇಲೆ ಹೆಚ್ಚಿನ ನಿಗಾವಹಿಸುತ್ತಾರೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ದಿನಗಳಲ್ಲಿ ಪ್ರೇಕ್ಷಕರ ಕೊರತೆ ಬಹಳಷ್ಟು ಎದ್ದು ಕಾಣುತ್ತದೆ. ಕಾಲಮಿತಿಯಲ್ಲಿ ಎಷ್ಟೇ ಒಳ್ಳೆಯ ಪ್ರಸಂಗ ಇದ್ದರು ಕೂಡ ಕೊನೆಯಲ್ಲಿ ಪ್ರೇಕ್ಷಕರು ಇರುವುದಿಲ್ಲ. ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳ ಪ್ರಭಾವ ಕೂಡ ಪರಿಣಾಮ ಬೀರುತ್ತದೆ. ಪ್ರಬುದ್ಧ ಪ್ರೇಕ್ಷಕರು ಕೆಲವೊಮ್ಮೆ ತಪ್ಪುಗಳನ್ನು ನೇರವಾಗಿ ನಮ್ಮಲ್ಲಿ ಹೇಳುತ್ತಾರೆ. ಅದು ನಮಗೆ ಇನ್ನಷ್ಟು ಕಲಿಯಲು ಸ್ಫೂರ್ತಿ ಆಗುತ್ತದೆ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಇದು ನನ್ನ ಒಬ್ಬನಿಂದ ಆಗುವ ಕಾರ್ಯವಲ್ಲ. ಯಕ್ಷಗಾನ ಉಳಿಯಬೇಕು, ಬೆಳೆಯಬೇಕು ಅಂತಾದರೆ ಕಲಾವಿದರ, ಕಲಾಪ್ರೇಕ್ಷಕರು ಎಲ್ಲರಿಂದ ಮಾತ್ರ ಸಾಧ್ಯ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷರಂಗದಲ್ಲಿ ನನಗೆ ದೊರೆತ ಎಲ್ಲಾ ರೀತಿಯ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇನ್ನಷ್ಟು ಕಲೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು, ಮುಂದಿನ ಯುವ ಪೀಳಿಗೆಗೆ ಯಕ್ಷಗಾನವನ್ನು ಪ್ರೀತಿಸುವ ಹಾಗೆ ಮಾಡುವುದು.





ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ, ಮೇಗರವಳ್ಳಿ, ಸೌಕೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಮಡಾಮಕ್ಕಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಜಡ್ಡಿನಗದ್ದೆಯಲ್ಲಿ ಸನ್ಮಾನ ಹಾಗೂ ಕೆಳಸುಂಕದಲ್ಲಿ ಹುಟ್ಟೂರು ಸನ್ಮಾನ ಮಾಡಿ "ಯಕ್ಷಚತುರ"ಎಂಬ ಬಿರುದನ್ನು ನೀಡಿ ಸನ್ಮಾನ, ಅಲ್ಲದೆ ಅನೇಕ ಸಂಘ ಸಂಸ್ಥೆಯವರು ಕಲೆಯನ್ನು ಗುರುತಿಸಿ ಗೌರವಿಸಿರುತ್ತಾರೆ.
ರಾಮಾಯಣ, ಮಹಾಭಾರತ, ಸಾಹಿತ್ಯ ಪುಸ್ತಕಗಳನ್ನು ಓದುವುದು ಹಾಗೂ ಯಕ್ಷಗಾನ ಬಯಲಾಟಗಳನ್ನು ನೋಡುವುದು ಇವರ ಹವ್ಯಾಸಗಳು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395