ಯಕ್ಷ ಸಾಧಕರು 379

"ಯಕ್ಷ ಕಲೋತ್ಸಾಹಿ"

ಮಂಗಳೂರಿನ ಡಾ.ಪಿ.ದಯಾನಂದ ಪೈ ಕಾಲೇಜ್ ನಲ್ಲಿ
MSW in Medical Psychiatric ವ್ಯಾಸಂಗ. ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಇದ್ದ ಉತ್ಸಾಹ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ. ನರಸಿಂಹ ಮಯ್ಯ, ಅಲೆತ್ತೂರ್ ಇವರ ಬಳಿ ಯಕ್ಷಗಾನ ಕಲಿತು ಇಂದು ಯಕ್ಷಗಾನ ರಂಗದಲ್ಲಿ ಪುರುಷ ಹಾಗೂ ಸ್ತ್ರೀ ವೇಷಗಳನ್ನು ಮಾಡಿ ತಲಕಳ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಹಿರಿಯಡಕ ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಕಲಾವಿದ ಪುನೀತ್ ಕುಲಾಲ್, ಕಲಾಬಾಗಿಲು.

ದಕ್ಷಿಣ ಕನ್ನಡ ಜಿಲ್ಲೆಯ ವಾಮದಪದವಿನ ಕಲಾಬಾಗಿಲೀನ ವಸಂತ ಕುಲಾಲ್ ಹಾಗೂ ಸೇಸಮ್ಮ ಇವರ ಮಗನಾಗಿ 13.05.2003ರಂದು ಜನನ.
ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಭಾವನಾತ್ಮಕ ಸ್ತ್ರೀ ವೇಷಗಳು ಹಾಗೂ ಶೃಂಗಾರ ಸ್ತ್ರೀ ವೇಷಗಳು ಇವರ ನೆಚ್ಚಿನ ವೇಷಗಳು.





ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹಿರಿಯ ಕಲಾವಿದರಲ್ಲಿ ವೇಷದ ಬಗ್ಗೆ ಹಾಗೂ ಅದಕ್ಕೆ ಬೇಕಾದ ಪದ್ಯಗಳ ಬಗ್ಗೆ ಕೇಳಿಕೊಳ್ಳುತ್ತೇನೆ ಹಾಗೂ ಯೂಟ್ಯೂಬ್ ನಲ್ಲಿ ಪ್ರಸಂಗದ ನಡೆಗಳನ್ನು ನೋಡಿಕೊಂಡು, ಗುರುಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ತುಂಬಾ ಬದಲಾವಣೆಗಳು ಆಗಿವೆ... ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಸಹಜ...
ಯುವ ಮನಸ್ಸುಗಳು ಯಕ್ಷಗಾನದಲ್ಲಿ ಒಲವು ಹೆಚ್ಚುತ್ತಿದೆ. ಅದೊಂದು ಸಂತೋಷದ ವಿಷಯ. ಯಕ್ಷಗಾನ ಕಲೆ ನಮ್ಮ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಒಳ್ಳೆಯದನ್ನು ಕೆಟ್ಟದು ಎಂದು ಬಿಂಬಿಸುವ ಪ್ರೇಕ್ಷಕರು ಇದ್ದಾರೆ. ಕೆಟ್ಟದನ್ನು ಒಳ್ಳೆಯದು ಎಂದು ಬಿಂಬಿಸುವ ಪ್ರೇಕ್ಷಕರು ಇದ್ದಾರೆ. ಕಲಾವಿದರು ಪ್ರೇಕ್ಷಕರ ಮನೋಭಾವನೆ ಏನು ಎಂದು ತಿಳಿದು ಒಳ್ಳೆಯ ಅಭಿಪ್ರಾಯಕ್ಕೆ ಮಾತ್ರ ವ್ಯವಹರಿಸಬೇಕಾಗಿದೆ. ಹೆಚ್ಚಿನ ಪ್ರೇಕ್ಷಕರು ಆಧುನಿಕ ಕತೆಗಳನ್ನು ಆಧರಿಸಿದ ಪ್ರಸಂಗಳನ್ನೇ ಇಷ್ಟ ಪಡುತ್ತಿದ್ದಾರೆ.
ಹಿಂದಿನ ಪ್ರೇಕ್ಷಕರ ವರ್ಗವೇ ಬೇರೆ. ಇತ್ತೀಚಿನ ಪ್ರೇಕ್ಷಕರ ವರ್ಗವೇ ಬೇರೆ. ಅಂತೂ ಎರಡು ವರ್ಗದವರ ಪ್ರೋತ್ಸಾಹ ಕಲಾವಿದರಿಗೆ ಮುಖ್ಯ.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನ ಬೆಳೆಯುತ್ತಲೇ ಇದೆ. ಯುವಶಕ್ತಿ ಈ ಕಲೆಗೆ ಆಕರ್ಷಿತರಾಗಿದ್ದಾರೆ ಮತ್ತು ಅದರಲ್ಲಿ ಒಂದಲ್ಲ ಒಂದು ವಿಭಾಗದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಿನ ಶಾಲೆಗಳಲ್ಲಿ ಪಟ್ಲ ಫೌಂಡೇಶನ್ ಅಡಿಯಲ್ಲಿ "ಯಕ್ಷ ಶಿಕ್ಷಣ"  ತರಬೇತಿಯನ್ನು ಅದೆಷ್ಟೋ ಯಕ್ಷಗುರುಗಳು ನೀಡುತ್ತಿದ್ದಾರೆ. ಯುವಕರೇ ಮುಂದಿನ ಭವಿಷ್ಯವನ್ನು ರೂಪಿಸುವವರು ಆಗಿರುವುದರಿಂದ ಯಕ್ಷಗಾನದ ನಿರಂತರ ಬೆಳವಣಿಗೆ ಖಂಡಿತ ಆಗುತ್ತಲೇ ಇರುತ್ತದೆ ಎಂದು ಹೇಳುತ್ತೇನೆ..




ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನ ಕ್ಷೇತ್ರದಲ್ಲಿ ಒಂದು ಒಳ್ಳೆಯ ಹೆಸರು ಮಾಡ್ಬೇಕು, ಸಾಧನೆ ಮಾಡಬೇಕು ಎನ್ನುವ ಆಸೆ ಇದೆ. ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸದೊಂದಿಗೆ ಯಕ್ಷಗಾನವನ್ನು ಮುಂದುವರಿಸಬೇಕೆಂದು ಬಯಕೆ ಇದೆ.

ಸನ್ಮಾನ ಹಾಗೂ ಪ್ರಶಸ್ತಿ:-
♦️ ಪಟ್ಲ ಸಂಭ್ರಮ 2023-24ರಲ್ಲಿ ನಡೆದ ಅಂತರ್ ಕಾಲೇಜ್ ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಉತ್ತಮ ಸ್ತ್ರೀ ವೇಷ ಪ್ರಥಮ ಹಾಗೂ ತಂಡಕ್ಕೆ ಶ್ರೇಷ್ಠ ಪ್ರಶಸ್ತಿ.
♦️ ಪಟ್ಲ ಸಂಭ್ರಮ 2025-26ರಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ದ್ವಿತೀಯ.
♦️ SDM Law College ನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಸ್ತ್ರೀ ವೇಷ ವಿಭಾಗ ಪ್ರಥಮ ಸ್ಥಾನ.
♦️ Aj Institution Of Engineering ಕಾಲೇಜ್ ನಲ್ಲಿ ನಡೆದ ವೈಯಕ್ತಿಕ ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
♦️ ಶ್ರೀ ದೇವಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
ನಾನು ಕಲಿತ ಯಕ್ಷಗಾನ ತರಗತಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಫ್ರೆಂಡ್ಸ್ ಅಂತರಗುತ್ತು  ಸನ್ಮಾನ.



ಡ್ಯಾನ್ಸಿಂಗ್, ಆಕ್ಟಿಂಗ್, ಪುಸ್ತಕ ಓದುವುದು, ಕಾಲೇಜ್ ನಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವುದು ಇವರ ಹವ್ಯಾಸಗಳು.

ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪುನೀತ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395