ಯಕ್ಷ ಸಾಧಕರು 383
"ಯಕ್ಷ ಭುವನ"
ಯಕ್ಷಗಾನ ಕಲೆಯ ಮೇಲೆ ಬಹಳ ಅಭಿರುಚಿ. ಬೋಳಾರ ಮೇಳ, ಮಂಗಳಾದೇವಿ ಮೇಳ, ತಲಕಳ ಮೇಳ ಹಾಗೆಯೇ ರಮೇಶ್ ಕುಲಶೇಖರ ಅವರ ಮಾರ್ಗದರ್ಶನದಲ್ಲಿ ಸುಂಕದಕಟ್ಟೆಯಲ್ಲಿ ಸೇವೆ ಹಾಗೂ ಸುರೇಂದ್ರ ಮಲ್ಲಿಯವರ ಮಾರ್ಗದರ್ಶನದಲ್ಲಿ ಬೆಂಕಿನಾಥೇಶ್ವರ ಮೇಳದಲ್ಲಿ ಸೇವೆ. ಬದಲಿಗನಾಗಿ ಸಸಿಹಿತ್ಲು, ಇರುವೈಲು, ಬಾಚಕೆರೆ ಮೇಳಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕಟೀಲು ಮೇಳದಲ್ಲಿ ಪೂರ್ಣ ಪ್ರಮಾಣದ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯುವ ಕಲಾವಿದ ಭುವನ್ ಶೆಟ್ಟಿ ಬೋಳಾರ.
ಬಾಲಕೃಷ್ಣ ಶೆಟ್ಟಿ ಹಾಗೂ ಹೇಮಲತಾ ಶೆಟ್ಟಿ ದಂಪತಿಯ ಸುಪುತ್ರನಾಗಿ 03-10-2003ರಂದು ಜನನ. ಜಯಕರ್ ಪಂಡಿತ್ ಇವರ ಯಕ್ಷಗಾನ ಗುರುಗಳು. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಮೇಘ ಸುವರ್ಣ.
ರಾಮಕೃಷ್ಣ ಶಾಲೆಯಲ್ಲಿ ಪ್ರೌಢಶಾಲೆ, ಕಿಟ್ಟೆಲ್ ಮೆಮೋರಿಯಲ್ ಮತ್ತು ಆಳ್ವಾಸ್ ಅಲ್ಲಿ ಪಿಯುಸಿ, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನಲ್ಲಿ BBA ಮಾಡಿ ಈಗ Dr.MV ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ MSW ವ್ಯಾಸಂಗವನ್ನು ಮಾಡುತ್ತಿದ್ದಾರೆ.
ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಲಲಿತೋಪಖ್ಯಾನ, ಹೊರತುಪಡಿಸಿ
ಗರುಡೋದ್ಭವ, ಶಶಿಪ್ರಭೆ ಪರಿಣಯ, ಸತ್ಯ ಹರಿಶ್ಚಂದ್ರ, ತಿರುಪತಿ ಕ್ಷೇತ್ರ ಮಹಾತ್ಮೆ, ರತಿ ಕಲ್ಯಾಣ. ಚಾಲೆಂಜಿಂಗ್ ಪಾತ್ರಗಳು ಸಿಗುವ ಎಲ್ಲಾ ಪ್ರಸಂಗಗಳು ಇಷ್ಟವೇ.
ನೆಚ್ಚಿನ ವೇಷಗಳು:-
ದೇವಿ, ಯಶೋಮತಿ, ನಂದಿನಿ, ಮೋಹಿನಿ, ದ್ರೌಪದಿ, ರತಿ, ಲಕ್ಷ್ಮೀ, ಪದ್ಮಾವತಿ, ಸುಭದ್ರಾ, ಶಶಿಪ್ರಭೆ, ದಾಕ್ಷಾಯಿಣಿ..
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪಾತ್ರದ ಹಿನ್ನಲೆಯನ್ನು ತಿಳಿಯುವುದು, ಹಿರಿಯ ಅನುಭವಿ ಕಲಾವಿದರಲ್ಲಿ ಮಾರ್ಗದರ್ಶನ ಪಡೆಯುವುದು, ಮತ್ತೆ ಪದ್ಯವನ್ನು ಓದಿ ಅದಕ್ಕೆ ತಕ್ಕಂತೆ ಅರ್ಥ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಭುವನ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಸಮಯದ ಕೊರತೆ ಇರುವ ಕಾರಣ ಸರಿಯಾಗಿ ಸಂಪೂರ್ಣವಾದ ಪ್ರದರ್ಶನ ನೀಡಲು ಅವಕಾಶ ಸಿಗುವುದಿಲ್ಲ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ವಿಮರ್ಶಕಾತ್ಮಕ ಪ್ರೇಕ್ಷಕರು. ಇವರುಗಳಿಂದ ಕಲಾವಿದರು ಹೆಚ್ಚಾಗಿ ಜಾಗ್ರತೆಯನ್ನು ವಹಿಸಿಕೊಳ್ತಾರೆ. ವಿಡಿಯೋ ಚಿತ್ರೀಕರಣ, ಫೋಟೋಸ್ ಗಳು ತೆಗೆಯುವ ಕಾರಣ ನಾವು ಎಚ್ಚೆತ್ತುಕೊಂಡಿರ್ತೇವೆ. ನಮ್ಮ ತಪ್ಪುಗಳನ್ನು ನೋಡಲು ಒಂದು ಅವಕಾಶ ಸಿಗುವುದು. ಒಳ್ಳೆಯ ಪ್ರೇಕ್ಷಕರು ರಂಗಕ್ಕೆ ಇನ್ನು ಮುಂದೆಯೂ ಬೇಕು. ಅವರಿದ್ದರೆ ನಾವು, ಇಲ್ಲಾಂದ್ರೆ ನಮ್ಮ ವೇಷ ಯಾರಿಗೆ? ಅಲ್ವೇ..
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಕಳೆದ 1 ವರ್ಷಗಳಿಂದ "ಪಾಂಚಜನ್ಯ ಪ್ರತಿಷ್ಠಾನ ಕುಡ್ಲ" ಎಂಬ ನನ್ನ ಸ್ವಂತ ತಂಡವನ್ನು ಕಟ್ಟಿ ಮುಖ್ಯವಾಗಿ ನೃತ್ಯ ಮತ್ತು ನಾಟಕ ಪ್ರದರ್ಶನವನ್ನು ನೀಡುತ್ತಾ ಬಂದಿರುತ್ತೇನೆ.
ನಾನು ಈಗಾಗಲೇ 4 ವರ್ಷಗಳಿಂದ "ಸ್ವಸ್ತಿಕ ಯಕ್ಷವಾಸ್ಯಂ" ಎಂಬ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡುತ್ತಿದ್ದೇನೆ. ನನಗೆ ತಿಳಿದ ಕಲೆಯನ್ನು ಮುಂದಿನ ಪೀಳಿಗೆಗೆ ಹೇಳಿಕೊಡುವ ಒಂದು ಪ್ರಯತ್ನ. ಅಧ್ಯಯನ ಎನ್ನುವುದು ಬಹಳ ಮುಖ್ಯವಾದದ್ದು.
ತಿರುಗಾಟ ಮಾಡುತ್ತಿರುವ ಕಟೀಲು ಮೇಳದ ಅನುಭವ ಹಾಗೂ ಹಿರಿಯ ಕಲಾವಿದರ ಜೊತೆಗಿನ ಒಡನಾಟದ ಬಗ್ಗೆ:-
ಒಂದು ಸುಂದರ ಅನುಭವ. ಹಿರಿಯ ಕಲಾವಿದರಾದ ವಿಷ್ಣು ಶರ್ಮರ ನಿರ್ದೇಶನವನ್ನು ಮರೆಯುವಂತಿಲ್ಲ. ಪಾತ್ರದ ಸಂಪೂರ್ಣ ಚಿತ್ರಣವನ್ನು ನೀಡುತ್ತಾರೆ. ಭಾಗವತರಾದ ಶ್ರೀನಿವಾಸ ಬಳ್ಳಮಂಜರ ಅವಕಾಶ ಸಪೋರ್ಟ್, ಮ್ಯಾನೇಜರ್ ಆದ ಪ್ರಕಾಶ್ ಶೆಟ್ಟಿಯವರ ಸಪೋರ್ಟ್, ಹಾಗೇ ನನ್ನ ವೇಷಕ್ಕೆ ನನಗೆ ಮಾಹಿತಿಗಳನ್ನು ನೀಡಿ ನಾನು ಕೇಳಿದ ವಿಷಯವನ್ನು ಇಲ್ಲ ಎನ್ನದೆ ಹೇಳಿಕೊಡುವ ಅಂಡಾಲ ಭಾಗವತರು, ಅಕ್ಷಯ್ ಮಾರ್ನಾಡ್, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಅರುಣ್ ಕೋಟ್ಯಾನ್, ಹಾಗೆಯೇ ಹಿಮ್ಮೇಳ ಮುಮ್ಮೇಳ ಕಲಾವಿದರು ತುಂಬಾ ಸಹಕಾರವನ್ನು ನೀಡಿದ್ದಾರೆ. 3 ವರ್ಷದ ಹಿಂದೆ 6ನೆ ಮೇಳದಲ್ಲಿ ಇರುವಾಗ ಮುಂಡಾಜೆ ಸದಾಶಿವ ಶೆಟ್ಟಿ, ಪುಂಡಿಕೈ ಭಾಗವತರು, ವಾದಿರಾಜ ಕಲ್ಲೂರಾಯ, ಆನಂದ ಕೊಕ್ಕಡ ಹಾಗೂ ಮೇಳದಲ್ಲಿ ಇದ್ದ ಹಿರಿಯ ಹಿಮ್ಮೇಳ ಮುಮ್ಮೇಳ ಕಲಾವಿದರು ತುಂಬ ಸಹಕಾರವನ್ನು ನೀಡಿದ್ದಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನವನ್ನು ಉನ್ನತ ಸ್ಥಾನಮಾನದಲ್ಲಿ ಕಾಣಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡುವುದು.
ಹವ್ಯಾಸಗಳು:-
ಯಕ್ಷಗಾನ, ಡ್ಯಾನ್ಸ್, ಡ್ರಾಮಾ, ಕಥೆ ಬರೆಯುವುದು, ನಾಟಕ ರಚನೆ, ಸಾಹಿತ್ಯ ಬರೆಯುವುದು, ಕಾರ್ಯಕ್ರಮ ನಿರೂಪಣೆ ಇತ್ಯಾದಿ. ಕಿರು ಚಿತ್ರ ಒಂದರಲ್ಲಿ ಅಭಿನಯ ಹಾಗೂ ಇನ್ನೂ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ ಬನ ಚಿತ್ರದಲ್ಲಿ ಪಾತ್ರವನ್ನು ಮಾಡಿರುತ್ತಾರೆ.
3 ಪ್ರಸಂಗ ರಚನೆ ಮಾಡಿದ್ದಾರೆ. ಬೇರೆ ಬೇರೆ ವಿದ್ಯಾ ಸಂಸ್ಥೆಗಳಲ್ಲಿ ನೃತ್ಯ ರೂಪಕಗಳನ್ನು ರಚಿಸಿ ನಿರ್ದೇಶನ ಮಾಡಿ ಪ್ರದರ್ಶನ ಮಾಡಿಸಿದ್ದಾರೆ.
ಸನ್ಮಾನ ಹಾಗೂ ಪ್ರಶಸ್ತಿ:-
♦️ ಕಲಾ ರತ್ನ ಪ್ರಶಸ್ತಿ,
♦️ ಶ್ರೇಷ್ಠ ಶಿಕ್ಷಕ,
♦️ ಯಕ್ಷ ನಾಟ್ಯ ಭೂಷಣ ಪ್ರಶಸ್ತಿ,
♦️ ಯಕ್ಷ ರಾಣಿ ಬಿರುದು
ಹಾಗೇ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿರುತ್ತಾರೆ. ಹಾಗೆಯೇ ಇವರಿಗೆ ನಿರೂಪಣೆ, ಭಾಷಣ, ನೃತ್ಯ ಕ್ಷೇತ್ರದಲ್ಲಿಯೂ ಬಹುಮಾನಗಳು ಸನ್ಮಾನಗಳು ದೊರೆತಿರುತ್ತವೆ..
ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಹಿರಿಯ ಕಲಾವಿದರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ನಾನು ಕಲಿತ ಶಾಲೆಯ ಅಧ್ಯಕ್ಷರು, ಪ್ರಿನ್ಸಿಪಾಲ್ ಹಾಗೆ ಶಿಕ್ಷಕರ ಸಪೋರ್ಟ್, ಹಾಗೆಯೇ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಮತ್ತು MV ಶೆಟ್ಟಿ ಕಾಲೇಜ್ ನ ಪ್ರಿನ್ಸಿಪಾಲ್ ಮತ್ತು ಎಲ್ಲಾ ಪ್ರಾಧ್ಯಾಪಕರ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಭುವನ್ ಶೆಟ್ಟಿ ಬೋಳಾರ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment