ಯಕ್ಷ ಸಾಧಕರು 390
"ಯಕ್ಷರಂಗದ ಚಿಗರೆ"
ಉಡುಪಿ ಜಿಲ್ಲೆಯ ಕುಂದಾಪುರದ ಕೆದೂರು ಇವರ ಹುಟ್ಟೂರು. ಊರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಊರಿನ ಹವ್ಯಾಸಿ ವೇಷಧಾರಿಗಳು ವೇಷ ಮಾಡುವುದನ್ನು ನೋಡಿ ಯಕ್ಷಗಾನದ ಮೇಲೆ ಆಸಕ್ತಿ ಮೂಡಿತು. ಗುರುಗಳಾದ ಪ್ರಸಾದ್ ಮೊಗೆಬೆಟ್ಟು ಇವರ ಬಳಿ ಹೆಚ್ಚಿನ ಯಕ್ಷಗಾನವನ್ನು ಕಲಿತು ನೀಲಾವರ, ಮಡಾಮಕ್ಕಿ, ಮೇಗರವಳ್ಳಿ ಮೇಳದಲ್ಲಿ ತಿರುಗಾಟ ಮಾಡಿ ಮುಂದಿನ ಯಕ್ಷಗಾನ ತಿರುಗಾಟವನ್ನು ಗೋಳಿಗರಡಿ ಮೇಳದಲ್ಲಿ ತಿರುಗಾಟ ಮಾಡಲಿದ್ದಾರೆ.
20.06.1998 ರಂದು ಶ್ರೀಮತಿ ಬಾಬಿ ಹಾಗೂ ನಾಗರಾಜ್ ಇವರ ಮಗನಾಗಿ ಗೌರೀಶ್ ಕೆದೂರು ಜನನ. ಡಿಗ್ರಿ ಇವರ ವಿದ್ಯಾಭ್ಯಾಸ.
ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ದಕ್ಷಯಜ್ಞ, ಚಂದ್ರಹಾಸ, ಕುಶಲವ, ವೀರಮಣಿ, ಮೈಂದ ದ್ವಿವಿದ, ನಾಗಮಂಡಲ, ಶ್ರೀದೇವಿ ಬನಶಂಕರಿ, ರುದ್ರಕೋಪ, ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಜಾಂಬವತಿ ಕಲ್ಯಾಣ, ಬರ್ಬರಿಕ ಮುಂತಾದ ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳು.
ನೆಚ್ಚಿನ ವೇಷಗಳು:-
ಕೃಷ್ಣ, ವಿಷ್ಣು, ಕುಶ-ಲವ, ರುಕ್ಮಾಂಗ- ಶುಭಾಂಗ, ಪುಷ್ಕಳ, ಮದನ, ನಾರದ, ಈಶ್ವರ, ಕೌಂಡ್ಲಿಕ, ಘಟೋದ್ಗಜ, ಬಲರಾಮ, ಚಂದ್ರಸೇನ, ಸುಧೀರ, ದುರ್ಮಖ-ದುರ್ಮತಿ, ಬಾಲ ಕಂಸ, ಮಹಿಷಾಸುರ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹಿರಿಯ ಕಲಾವಿದರಲ್ಲಿ ಮಾಹಿತಿ ಪಡೆದು ಅಧ್ಯಯನ ಮಾಡಿ, ಭಾಗವತರಲ್ಲಿ ಕೇಳಿ ವೇಷದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಗೌರೀಶ್ ಕೆದೂರು.
ಪೌರಾಣಿಕ ಪ್ರಸಂಗಗಳ ಬಗ್ಗೆ ನಿಮ್ಮ ಒಲವು:-
ಹಳೆಯ ಪ್ರಸಂಗಗಳ ಬಗ್ಗೆ ಅತಿಯಾದ ಒಲವಿದೆ. ಆದರೆ ಪ್ರೇಕ್ಷಕರು ಅತಿಯಾಗಿ ಹೊಸ ಪ್ರಸಂಗಗಳನ್ನು ನಿರೀಕ್ಷಿಸುತ್ತಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ :- ಪ್ರೇಕ್ಷಕರು ಹೊಸತನ ನಿರೀಕ್ಷಿಸುತ್ತಾರೆ. ಆದರೆ ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ ನೀಡಿದರೆ ನಮ್ಮಂತ ಯುವ ಕಲಾವಿದರಿಗೆ ಕಲಿಯುವುದಕ್ಕೆ ಅವಕಾಶ ದೊರಕುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನ ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಯುವಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ತಂತ್ರಜ್ಞಾನದಿಂದ ಯಕ್ಷಗಾನ ವಿಶ್ವದಾದ್ಯಂತ ತಲುಪುತ್ತಿದೆ. ಆದರೆ ಅದರ ಸಂಪ್ರದಾಯ, ಸಾಹಿತ್ಯ ಮತ್ತು ಆಹಾರ್ಯದ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ.
ಯಕ್ಷಗಾನದ ಮುಂದಿನ ಯೋಜನೆಗಳು:-
ಹಿರಿಯ ಕಲಾವಿದರು ಹಾಗೂ ಗುರುಗಳನ್ನು ಮಾದರಿ ಆಗಿ ಸ್ವೀಕರಿಸಿ, ಒಳ್ಳೆಯ ಕಲಾವಿದನಾಗಿ ರಂಗದ ಚೌಕಟ್ಟನ್ನು ಮೀರದೆ ಪ್ರೇಕ್ಷಕರಿಗೆ ಹೆಚ್ಚಿನ ಮನೋರಂಜನೆ ನೀಡುವುದು.
ಸ್ಥಳೀಯ ಸಂಘ ಸಂಸ್ಥೆಗಳು ತುಂಬಾ ಪ್ರೋತ್ಸಾಹ ನೀಡಿದ್ದಾರೆ.
ಪುಸ್ತಕ ಓದುವುದು, ಹಳೆಯ ಸಿನಿಮಾ ನೋಡುವುದು ಇವರ ಹವ್ಯಾಸಗಳು.
ತಂದೆ ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ಗೌರೀಶ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
ತುಂಬಾ ಆಪ್ತವೆನಿಸುವ ಪರಿಚಯಸಹಿತದಿ ಬರೆದಿರಿ ಶ್ರವಣ್
ReplyDeleteಶುಭಹಾರೈಸುತ್ತೇನೆ ಎಲ್ಲರಿಗೂ
ಧನ್ಯವಾದಗಳು ❤🙏
Delete